ಮೂಡುಬಿದಿರೆ:  ನಿರ್ಭಿತ, ನಿರ್ಧಾಕ್ಷಿಣ್ಯ, ಸೂಕ್ಷ್ಮ ವಿಮರ್ಶಾ , ತಪಸ್ವಿಯಾದ ಶಿವರಾಮ ಕಾರಂತರು ಪ್ರಭುತ್ವಕ್ಕೆ ಎಂದೆಂದೂ ತಲೆಬಾಗದ ನೇರ ನಿಷ್ಠುರವಾದಿ ಆಗಿದ್ದರು. ಪ್ರತಿ ಹೆಜ್ಜೆಯಲ್ಲಿಯೂ ಆಳ್ವಿಕೆಯಲ್ಲಿ ಮುಚ್ಚಿಟ್ಟಿದ್ದನ್ನು ಹುಡುಕಾಡಿ ಶೋಧಿಸಿ ಮಾಧ್ಯಮದವರಂತೆ ಬದುಕಿದ ಸಂಶೋಧಕ  ಶಿವರಾಮ ಕಾರಂತರು. ಸಮಾಜಮುಖಿ ಚಿಂತನೆಯಂತೆಯೇ ವಿಜ್ಞಾನದ ತಾತ್ವಿಕ ಚಿಂತನೆಗಳು, ಭಾವದ ಪರವಾದ ಭೋರ್ಗರೆತೆವು ಮೇಳೈಯಿಸಿದ ಕಾರಣ ಬಾಳ್ವೆಯೇ ಬೆಳಕಾಗಿ ಮಿನುಗಿದವರು. ಶಿವರಾಮ ಕಾರಂತರು ಎಂದು 2023ರ ಶಿವರಾಮ ಕಾರಂತ ಪ್ರಶಸ್ತಿ - ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಕೇಂದ್ರ  ಸಾಹಿತ್ಯ ಅಕಾಡೆಮಿ ಪುರಸ್ಕೃತ ಪುತ್ತೂರಿನ ಲಕ್ಷ್ಮೀಶ  ತೋಳ್ಪಾಡಿ ಅವರು ಕಾರಂತರೊಂದಿಗೆ  ತನ್ನ ಹಲವಾರು ನೈಜ ಸಂಗತಿಗಳನ್ನು ಹಂಚಿಕೊಂಡರು .    

ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಮಹಾಕವಿ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ 2023ರ ಶಿವರಾಮ ಕಾರಂತ ಪ್ರಶಸ್ತಿಯನ್ನು ಮೈಸೂರಿನ ಕೃಷ್ಣಮೂರ್ತಿ ಹನೂರು, ಬೆಂಗಳೂರಿನ ಮೂಡ್ನಾಕೂಡು ಚಿನ್ನಸ್ವಾಮಿ, ಉಡುಪಿಯ ಕೆ.ಪಿ ರಾವ್,  ಹಾಗೂ ಹೆಗ್ಗೋಡಿನ  ನೀನಾಸಂರಂಗ ಮಂದಿರದವರಿಗೆ ಹಾಗೂ ಶಿವರಾಮ ಕಾರಂತ ಪುರಸ್ಕಾರವನ್ನು  ಎಚ್ ಆರ್ ಲೀಲಾವತಿ, ಡಾ. ಜನಾರ್ಧನ ಭಟ್, ಪ್ರೊಫೆಸರ್ ಎಚ್ ಟಿ ಪೋತೆ, ಹಾಗೂ ಡಾ. ನಿತ್ಯಾನಂದ ಶೆಟ್ಟಿಯವರಿಗೆ ಪ್ರಧಾನ ಮಾಡಲಾಯಿತು.

ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ  ಜಯಶ್ರೀ  ಅಮರನಾಥ ಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ ಶ್ರೀಪತಿ  ಭಟ್, ಡಾಕ್ಟರ್ ಮೋಹನ್ ಆಳ್ವ, ಡಾಕ್ಟರ್ ಧನಂಜಯ ಕುಂಬ್ಳೆ ಹಾಜರಿದ್ದರು. ಕೋಶಾಧಿಕಾರಿ ಕೃಷ್ಣರಾಜ ಹೆಗ್ಡೆ  ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ , ಡಾ. ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.

ಸಚಿತ್ರ ವರದಿ: ರಾಯಿ ರಾಜ ಕುಮಾರ್ ಮೂಡುಬಿದಿರೆ.