ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ದರೆಗುಡ್ಡೆ ಸೋಮನಾಥೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ನ ವಾರ್ಷಿಕ ಮಹಾಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದರೆಗುಡ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಇವರು ವಹಿಸಿದ್ದರು. ಒಕ್ಕೂಟದ ಅಧ್ಯಕ್ಷರಾದ ಪ್ರೇಮರವರು, ಕಾರ್ಯದರ್ಶಿ ಸುಜಾತರವರು, ಪಂಚಾಯತ್ PDO, ಪಂಚಾಯತ್ ಉಪಾಧ್ಯಕ್ಷರು ಹಾಗು ಸದ್ಯಸರು, Nrlm ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ನಿಖಿಲ್ ಸರ್ ರವರು ಹಾಜರಾಗಿದ್ದರು 

ಲಿಂಗತ್ವದ ಮಾಹಿತಿಯನ್ನು ಅಶೋಕ್ ಸರ್ ರವರು ನೀಡಿದರು. ಒಕ್ಕೂಟದ ಕಾರ್ಯಕಾರಿ ಸಮಿತಿಗೆ ಹೊಸ ಅಧ್ಯಕ್ಷರು, ಕಾರ್ಯದರ್ಶಿ ಹಾಗು ಪದಾಧಿಕಾರಿಯವರನ್ನು, ಆಯ್ಕೆ ಮಾಡಲಾಯಿತು. ಒಕ್ಕೂಟದ ಮಾಜಿ ಪದಾಧಿಕಾರಿಯವರು, ಸಂಘದ ಸದಸ್ಯರು, ಒಕ್ಕೂಟದ ಸಿಬ್ಬಂದಿಯರು, ಪಂಚಾಯತ್ ಸಿಬ್ಬಂದಿಯರು ಹಾಜರಿದ್ದರು.