ಮೂಡುಬಿದಿರೆ: ಇಂದು ಜೈನರ ಪವಿತ್ರ ಶಾಶ್ವತ ಸಿದ್ದ ಕ್ಷೇತ್ರ ಸಮ್ಮೇದ ಶಿಖರ್ಜಿಯ ತಮಿಳುನಾಡು ಭವನ ಲಘುಪಂಚ ಕಲ್ಯಾಣ ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಜಾರ್ಖಾoಡ್ ಗೌರವಾನ್ವಿತ ರಾಜ್ಯಪಾಲ  ಸಿ ಪಿ ರಾಧಕ್ರಷ್ಣನ್ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ, ಶ್ರೀ ಜೈನಮಠ ಮೂಡುಬಿದಿರೆ ಇವರ ಉಪಸ್ಥಿತಿಯಲ್ಲಿ 05.05.2023ರಂದು ಬೆಳಿಗ್ಗೆ 9.35ಕ್ಕೆ ನೆರವೇರಿಸಿದರು ಹಾಗೂ ನಾವು ಇಂದು ಅಹಿಂಸೆಯಿಂದ ಮಾತ್ರ ನೆಮ್ಮದಿ ಪಡೆಯಲು ಸಾಧ್ಯ ಶಾಖಾಹಾರ ಆಹಾರ ಮಾನವ ಜೀವನಕ್ಕೆ ಸಾತ್ವಿಕ ಮನೋಭಾವನೆಗೆ ಸಹಕಾರ ನೀಡುದು ಜೈನ ಶ್ರಮಣರ ತಪಸ್ಸು ಧ್ಯಾನ ನಮಗೆ ಬಾಲ್ಯದಿಂದ ಪ್ರೇರಣೆ ನೀಡಿದೆ. ತಮಿಳು ಸಾಹಿತ್ಯ ಕ್ಕೆ ಜೈನ ಸಾಧುಗಳ ಕೊಡುಗೆ ಅಪಾರ ಮೂಡುಬಿದಿರೆ ಸ್ವಾಮೀಜಿಗಳನೇತೃತ್ವ ಆಚಾರ್ಯ ಶಂಭವ ಸಾಗರ್ ಮುನಿರಾಜರ ಸಾನಿಧ್ಯದಲ್ಲಿ ಇಂದಿನಿಂದ ಮೂರು ದಿನಗಳ ಭಗವಾನ್ ಚಂದ್ರ ಪ್ರಭಸ್ವಾಮಿ ಶಿಖರ್ಜಿ ಮದುಬನ್, ಗಿರಿಡಿ ತಾಲೂಕು ಜಾರ್ಖoಡ್ ರಾಜ್ಯ  ಲಘು ಪಂಚ ಕಲ್ಯಾಣ ಅತ್ಯಂತ ಯಶಸ್ವೀಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. 

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಆಶೀರ್ವಾದ ಮಾಡಿ ತಮಿಳುನಾಡು 2000 ವರ್ಷ ಮೊದಲೆ ಶ್ರಮಣರ ತಮಿಳುನಾಡು ಕುರಲ್ ಸಮಯ ಸಾರದಂತ ಮಹತ್ವದ ಸಿದ್ದಾ oಥ ಗ್ರಂಥ ನೀಡಿದ ಶ್ರೇಷ್ಠ ಭೂಮಿ ತಮಿಳು ಸಾಹಿತ್ಯ ಶಾಸ್ತ್ರೀಯ ಸ್ಥಾನಮಾನ ಬರಲು ಈ ಶ್ರೇಷ್ಠ ಸಾಹಿತ್ಯ ಕಾರಣ ಅದೇ ತಮಿಳುನಾಡುವಿನಲ್ಲಿ ಹುಟ್ಟಿದ ಸಿಪಿ ರಾಧಾ ಕೃಷ್ಣ ನ್ ರಾಜ್ಯಪಾಲರಾಗಿ ನಮ್ಮ ಸಿದ್ದ ಕ್ಷೇತ್ರ ಇರುವ ರಾಜ್ಯದ ರಾಜ್ಯ ಪಾಲರಾಗಿ ಶಾಖಹಾರಕ್ಕೆ ಆಹಾರ ಪದ್ಧತಿ ಅನುಸರಿಸಿ ಪ್ರೊಸ್ಸಾಹ ನೀಡುತ್ತಿರುದು ಸಂತೋಷ ಎಂದು ತಿಳಿಸಿ ಶಾಲು ಹಾರ ಹಾಕಿ ಪೇಟ ತೊಡಿಸಿ, ಕೃಷ್ಣ ಯ್ಯ ಉಡುಪಿ ನೀಡಿದ ಒಪ್ಪಿಕೊ ಹಸಿರು ಪೆಚ್ಚೆವನ ಅಭಿಯಾನ ಅಂಗವಾಗಿ ತಾಳೆ ವ್ರಕ್ಷ ದ ಬೀಜ ಸಾವಿರ ಕಂಬ ಬಸದಿ ಸ್ಮರಣಿಕೆ ಧವಲ ಕೀರ್ತಿ ಭಟ್ಟಾರಕ ಪ್ರಮಾಣ ಸಾಗರ್ ಮುನಿರಾಜ್ ನೀಡಿದ ತತ್ವ ವಿದ್ಯಾಪುಸ್ತಕ ನೀಡಿ ಹರಸಿ ಆಶೀರ್ವಾದ ಮಾಡಿದರು.  ಈ ಮೊದಲು ಪೂಜ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನವ ಗ್ರಹಶಾಂತಿಯಲ್ಲಿ ರಾಜ್ಯ ಪಾಲರು ಅಜ್ಯ, ಸಮಿತ್ತು ಅನ್ನ, ಲವಂಗ, ಅಹುತಿ ನೆರವೇರಿಸಿ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಪೂಜೆ ಮಾಡಿಸಿ ಮೂಡುಬಿದಿರೆ ಸ್ವಾಮೀಜಿಯಿಂದ ಪ್ರಸಾದ ಸ್ವೀಕರಿಸಿ ಕುಂಬಾಬೀಷೇಕ ನೆರವೇರಿಸಿದರು.

ಸ್ಥವಿರ ಆಚಾರ್ಯ 108 ಶಂಭವ್ ಸಾಗರ್ ಮುನಿರಾಜ್ ಪಾವನ ಸಾನಿಧ್ಯ ವಹಿಸಿ ದೇಹ ನಶ್ವರ ಹುದ್ದೆ ಭೌತಿಕ ಸಂಪತ್ತು ಎಲ್ಲಾ ನಶ್ವರ ಆತ್ಮ ಶಾಶ್ವತ ಸಾಮಾನ್ಯರು ಭಗವಂತರಾಗಲು ಯೋಗ್ಯ ಸಾಧನೆ ಅವಶ್ಯ ಎಂದು ನುಡಿದರು.  ಮೋಕ್ಷ ಸಾಗರ್ ಮುನಿರಾಜ್ ಮಾತಾಜಿ ಸಾದು ಸಾದ್ವಿಯರು  ನಿವ್ರತ್ತ ಏರ್ ಮಾರ್ಷಲ್ ವರ್ಧಮಾನ ಜೈನ್ ಅಶೋಕ್ ಭವನ ವ್ಯವಸ್ಥಾಪಕ ಪಂಡಿತ್ ಜಯ ಬಾಲನ್ ಸನತ್ ಕುಮಾರ್ ಅಜಿತ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರಗೀತೆ 

ಜನ ಗಣ ಮನದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು ಅಶೋಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.