ಮೂಡುಬಿದಿರೆ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮೂಡುಬಿದಿರೆ ಪೇಟೆಯ ಮತದಾರರೊಂದಿಗೆ ಮತಯಾಚನೆ ನಡೆಸಿದರು. ಆಲಂಗಾರಿನಿಂದ ಪಾದಯಾತ್ರೆ ಪ್ರಾರಂಭಿಸಿದ ಅವರು ಜೈನಪೇಟೆ ಮಾರ್ಗವಾಗಿ ಪೇಟೆಯಲ್ಲಿ ಮತಯಾಚಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಸಕರು ನಡೆಸಿರುವ ಭ್ರಷ್ಟಾಚಾರ, ಆಣೆ ಪ್ರಮಾಣದ ಮೂಲಕ ಸುಳ್ಳು ಹೇಳಿಕೆ, ಸಂತ್ರಸ್ತ ರನ್ನು ವಿಶ್ವಾಸಕ್ಕೆ ಪಡೆಯದೆ ಕೈಗಾರಿಕೆಗೆ ಭೂಮಿ ನೀಡಿರುವುದರ ಬಗ್ಗೆ ಜನಾಕ್ರೋಶ ಇರುವುದಾಗಿ ತಿಳಿಸಿದರು. ಮಾಜಿ ಸಚಿವ ಅಭಯಚಂದ್ರ, ಕೆಫಿಸಿಸಿ ಸದಸ್ಯ ಚಂದ್ರಹಾಸ ಸನಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಪಿಕೆ ಥೋಮಸ್, ಸುರೇಶ್ ಕೋಟ್ಯಾನ್, ಜೋಸ್ಸಿ ಮಿನೇಜಸ್ ಭಾರೀ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.