ಉಡುಪಿ:  ಐದು ವರುಷಗಳ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಆರೋಗ್ಯ ಮತ್ತು ಶಿಕ್ಷಣ ಸೇವೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಉಡುಪಿ ಜಿಲ್ಲೆ ಈಗ 18ನೇ  ಸ್ಥಾನಕ್ಕೆ ಜಾರಿದೆ. ನಿಮಗೆ ಕೆಲಸ ಮಾಡಲು ಆಗದಿದ್ದರೆ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡುಪಿ ಪ್ರಗತಿ ಪರಿಶೀಲನೆಯ ಬಳಿಕ ಹೇಳಿದರು.

ಮಂಗಳೂರಿನಲ್ಲಿ ಬಟ್ಟತ್ತಡಿ ಕಡಲ್ಕೊರೆತ ವೀಕ್ಷಿಸಿದ ಮುಖ್ಯಮಂತ್ರಿಗಳು ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಮಂಗಳೂರಿನ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಮುಖ್ಯಮಂತ್ರಿಗಳು ಮಾದಕ ದ್ರವ್ಯ ಸಾಗಿಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಹೆಚ್ಚು ಕಲಿಕೆ, ಬುದ್ಧಿವಂತರ ಜಿಲ್ಲೆ ಎನ್ನುತ್ತೀರಾ ಜಾತೀ ಗೂಂಡಾಗಿರಿಯಲ್ಲಿ ತೊಡಗಿದ್ದೀರಾ ಎಂದು ಅವರು ವಿಷಾದಿಸಿದರು.