ಮಣಿಪುರದಲ್ಲಿ ಕ್ರಿಶ್ಚಿಯನ್ ಜನರ ಮೇಲೆ ಬಿಜೆಪಿ ಬೆಂಬಲಿತ ಹಿಂಸಾಚಾರದಿಂದ ತುಂಬ ನೋವಾಗಿದೆ ಎಂದ ಮಿಜೋರಾಂ ಬಿಜೆಪಿ ಉಪಾಧ್ಯಕ್ಷ ಆರ್. ವನ್ರಮ್ ಚಾಂಗ ಅವರು ಬಿಜೆಪಿ ಉಪಾಧ್ಯಕ್ಷ ಹುದ್ದೆಗೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿ ಪ್ರೇರಿತ ಮೈತೈಗಳು ಕ್ರಿಶ್ಚಿಯನರ 357 ಇಗರ್ಜಿ, ಪಾಸ್ಟರ್‌ಗಳ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಲಕ್ಷಾಂತರ ಮಂದಿ ಕ್ರೈಸ್ತರು ನಿರಾಶ್ರಿತರಾಗಿದ್ದಾರೆ. ಬಿಜೆಪಿ ಬಂದ ಮೇಲೆ ಬೇಕಾಬಿಟ್ಟಿ ಬಂದೂಕು ಲೈಸೆನ್ಸ್ ನೀಡಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಣಿಪುರಕ್ಕೆ ಬಂದು ಮುಖ್ಯಮಂತ್ರಿ ಮನೆಯಲ್ಲಿ ಏನು ವ್ಯವಹಾರ ಮಾಡಿದರು? ಸಮಸ್ಯೆ ಬಗೆಹರಿಸಿಲ್ಲ ಎಂದು ಚಾಂಗ ಹೇಳಿದರು.