ತಾಯ್‌ಲ್ಯಾಂಡಿನ ಬ್ಯಾಂಕಾಕ್‌ ನಗರದಲ್ಲಿ ನಡೆಯುತ್ತಿರುವ ಏಶಿಯನ್ ಅಥ್ಲೆಟಿಕ್ಸ್‌ನ ಮೂರನೆಯ ದಿನ ಭಾರತವು ಎರಡು ಚಿನ್ನದ ಪದಕಗಳನ್ನು ಗೆದ್ದು ಬಂಗಾರವನ್ನು ಐದು ಮಾಡಿತು. ಪಾರುಲ್ ಚೌಧರಿ ಮಿಂಚು ಹರಿಸಿ ಸ್ಟೀಪಲ್ ಚೇಸ್‌ನಲ್ಲಿ ಸ್ವರ್ಣ ಜಯಿಸಿದರು.

ತಜಿಂದರ್ ಪಾಲ್ ಸಿಂಗ್ ಶಾಟ್‌ಪಟ್‌ನಲ್ಲಿ ಚಿನ್ನ ಉಳಿಸಿಕೊಂಡರು. ಕಳೆದ ಬಾರಿಯೂ ಗೆದ್ದಿದ್ದ ಅವರು 20.23 ಮೀಟರ್‌ ಎಸೆದ ಏಶಿಯನ್ ದಾಖಲೆಯನ್ನೂ ಉಳಿಸಿಕೊಂಡರು. ಭಾರತವು ಒಟ್ಟು 5 ಚಿನ್ನ, 1 ಬೆಳ್ಳಿ, 3 ಕಂಚು ಪಡೆದಿದೆ.