ಮಂಗಳೂರು: ಇತ್ತೀಚಿಗೆ ಅಗಲಿದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾದ ಸಲೀಂ ಬಂದರ್, ಪ್ರಭಾವತಿ ಶೆಣೈ, ಸಿ. ಎಂ. ಮುಸ್ತಫಾ ಅವರಿಗೆ ಶುಕ್ರವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಐವನ್ ಡಿಸೋಜ, ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಶಾಹುಲ್ ಹಮೀದ್, ಆರೀಫ್ ಬಾವಾ ಬಂದರ್, ಮಂಜುಳಾ ನಾಯಕ್ ಅಗಲಿದ ಕಾರ್ಯಕರ್ತರ ಬಗ್ಗೆ ಭಾವುಕ ಮಾತುಗಳನ್ನಾಡಿ ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್,  ಕಾರ್ಪೊರೇಟರ್ ಗಳಾದ ಲ್ಯಾನ್ಸಿ ಲೋಟೊ ಪಿಂಟೋ, ಲತೀಫ್ ಕಂದಕ್, ಸಂಶುದ್ದೀನ್ ಕುದ್ರೋಳಿ, ಕೆ.ಇ.ಅಶ್ರಫ್, ಝೀನತ್ ಸಂಶುದ್ದೀನ್ ಬಂದರ್, ಮಾಜಿ ಮೇಯರ್ ಅಶ್ರಫ್, ಮೊಹಮ್ಮದ್ ಕುಂಜತ್ತಬೈಲ್, ಪದ್ಮನಾಭ ಅಮೀನ್ ಹಾಗೂ ಡಿಸಿಸಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. 

ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ವಂದಿಸಿದರು.