ಮಂಗಳೂರು: ಬಂಟರು ಈ ಪ್ರದೇಶವನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸಿದ್ದು, ಎಲ್ಲ ಕ್ಷೇತ್ರಗಳಲ್ಲೂ ಪ್ರಬುದ್ಧರು. ಆಧ್ಯಾತ್ಮಿಕ, ಧಾರ್ಮಿಕವಾಗಿ ಹಿಂದುಳಿದಿದ್ದು, ದೇವ, ದೈವಗಳ ಕುರಿತು ಜಿಜ್ಞಾಸೆಗಳಿವೆ. ನಮ್ಮ ಸಂಪ್ರದಾಯಗಳನ್ನು ತಿಳಿದುಕೊಳ್ಳಲು ಕುಲಗುರುವಿನ ಅಗತ್ಯವಿದೆ ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಡಾ. ವಿದ್ಯಾವಾಚಸ್ಪತಿ ವಿಶ್ವಸಂತೋಷಭಾರತಿ ಸ್ವಾಮೀಜಿ ಹೇಳಿದರು.

ಆಡ್ಯಾರ್ ಗಾರ್ಡನ್‌ನಲ್ಲಿರುವ ವಿ.ಕೆ.ಶೆಟ್ಟಿ ಸಭಾಂಗಣದಲ್ಲಿ  ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಶ್ರೀ ಸಂಸ್ಥಾನದ ದಶಮ ಸಂಭ್ರಮದ ಸಂಕಲ್ಪ 'ಬಂಟ ಸಂಸ್ಕೃತಿ ಪರಂಪರೆ ಅನಾವರಣ' ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಹಾ ಮಂಡಲದ ಪದಗ್ರಹಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮುಂಬಯಿ ಹೇರಂಭ ಇಂಡಸ್ಟ್ರೀಸ್ ಸಿಇಒ ಡಾ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಆಶಯ ನುಡಿಗಳ ಜತೆಗೆ ಎಂಟು ಮಂಡಲಗಳ ಪದಾಧಿಕಾರಿಗಳ ಘೋಷಣೆ ಮಾಡಿದರು.

ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ದ. ಕ. ಮಹಾ ಮಂಡಲ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಶುಭ ಹಾರೈಸಿದರು. ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ ನಿಟ್ಟೆಗುತ್ತು ರವಿರಾಜ ಶೆಟ್ಟಿ ದಿವಾಕರ ಶೆಟ್ಟಿ ಅಡ್ಯಾರ್, ಜಗನ್ನಾಥ ಚೌಟ, ಕಾವು ಹೇಮನಾಥ ಶೆಟ್ಟಿ ಶೋಭಾ ಶೆಟ್ಟಿ, ಆನಂದ ಶೆಟ್ಟಿ ಕಾವೂರು, ವಸಂತ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಜೆಪ್ಪಿನಮೊಗರು, ಚಂದ್ರಹಾಸ ಆಡ್ಯಂತಾಯ, ಗಂಗಾಧರ ರೈ ಸೋಣಂಗೇರಿ, ಐತಪ್ಪ ಆಳ್ವ ವಿದ್ಯಾಧರ ಶೆಟ್ಟಿ ಮೂಲ್ಕಿ, ಜಯರಾಮ ಶೆಟ್ಟಿ, ಜಯಂತ ಶೆಟ್ಟಿ, ಗೊವರ್ಧನ ಶೆಟ್ಟಿ ಸಂತೋಷ್ ಶೆಟ್ಟಿ ಶೆಡ್ಡೆ, ತಿಮ್ಮಯ್ಯ ಶೆಟ್ಟಿ, ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ  ಕಂಫರ್ಟ್, ಕೋಶಾಧಿಕಾರಿ ಆನಂದ ಶೆಟ್ಟಿ ತೊಕ್ಕೊಟ್ಟು, ಪ್ರಧಾನ ಸಂಚಾಲಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು, ಸಂಸ್ಥಾನದ ವಕ್ತಾರ ಭಾಸ್ಕರಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟ್ ನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಾಸ್ತಾವಿಕ ಮಾತನಾಡಿದರು. ಸ್ವಾಮೀಜಿ ಅವರನ್ನು ಕಿಶೋರ್ ಭಂಡಾರಿ ಬೊಳ್ಳೂರು ಪರಿಚಯಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಮತ್ತು ಅಕ್ಷತಾ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಕ್ತಾರ ಕೆ. ರಾಜೇಶ್ ಶೆಟ್ಟಿ ಶಬರಿ ವಂದಿಸಿದರು.