ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಗಸ್ಟ್ 15 ಮತ್ತು ಆಗಸ್ಟ್ 16ರಂದು ಸಂಭ್ರಮದ ಶ್ರೀ ಕೃಷ್ಣಜನಾಷ್ಟಮಿ ಮತ್ತು ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಸಂಪನ್ನಗೊಂಡಿತು. ಆಗಸ್ಟ್ 15 ರಂದು ಪ್ರಾತಃಕಾಲ 6:00 ರಿಂದ ಶ್ರೀ ದೇವರಿಗೆ ಪಂಚಾಮೃತಾಭಿಷೇಕ , ಬೆಳಿಗ್ಗೆ 7:30ಕ್ಕೆ ಶ್ರೀಗಣಪತಿ ಹವನ ನಂತರ ಮಹಾಪೂಜೆ ಜರುಗಿತು. ನಂತರ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ಹಾಗೂ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮಹಾಪೂಜೆ ನಡೆಯಿತು. ಅಂದು ಸಂಜೆ 5 ಗಂಟೆಯಿಂದ ಶ್ರೀ ರುದ್ರ ಸಮಿತಿ ಮಂಗಳೂರು ಇವರಿಂದ ವಿಷ್ಣು ಸಹಸ್ರನಾಮ ಪಠಣ ಹಾಗೂ ಭಗವದ್ಗೀತಾ ಪಾರಾಯಣ ನಡೆಯಿತು. ರಾತ್ರಿ 8 ಗಂಟೆಯಿಂದ 11-30ರ ತನಕ ನಗರದ ವಿವಿಧ ಭಜನಾ ತಂಡಗಳಿಂದ ಭಜನಾ ನಾಮ ಸಂಕೀರ್ತನೆ ರಾತ್ರಿ 11:30ಕ್ಕೆ ವಿಶೇಷ ಆಲಂಕಾರ ಪೂಜೆ ನೆರವೇರಿತು. ಶ್ರೀಕೃಷ್ಣಜನ್ಮಷ್ಟಮಿಯ ಸಮಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ಅಘ್ರ್ಯ ಪ್ರಧಾನ ನೆರವೇರಿತು. ಈ ಸಂದರ್ಭದಲ್ಲಿ ನಗರದ ಅನೇಕ ಭಕ್ತಾದಿಗಳು ಈ ಅಘ್ರ್ಯಪ್ರಧಾನ ಸೇವೆಯಲ್ಲಿ ಬಾಗವಹಿಸಿದರು.
ಈ ಸಂದರ್ಭದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ಅವರು ಮಾತನಾಡಿ ಶ್ರೀಕೃಷ್ಣನಿಗೆ ಪ್ರೀಯವಾದ ಅಘ್ರ್ಯವನ್ನು ಪ್ರಧಾನ ಮಾಡುವುದು ಶ್ರೀದೇವರಿಗೆ ತುಂಬಾ ಇಷ್ಟವಾಗಿರುತ್ತದೆ. ಅವನು ಹುಟ್ಟಿದ ನಂತರ ಕಂಸನ ವಧೆ ಮಾಡುತ್ತಾನೆ. ಯಾರಿಗೂ ನಾವು ತೊಂದರೆಯನ್ನು ಮಾಡಬಾರದು. ನಮ್ಮ ಮನಸ್ಸಿನಲ್ಲಿರುವ ಇಷ್ಟರ್ಥವನ್ನು ಶ್ರೀದೇವರು ಈಡೇರಿಸುತ್ತಾರೆ. ಅದೇತರ ನಮ್ಮದೇಶಕ್ಕೆ ಬರುವ ಎಲ್ಲಾ ಕಷ್ಟಗಳನ್ನು ಶ್ರೀದೇವರು ಪರಿಹರಿಸಬೇಕೆಂದು ಹೇಳಿದರು.
ಆಗಸ್ಟ್16ರಂದು ಪ್ರಾತಃಕಾಲ 6 ಗಂಟೆಗೆ ಶ್ರೀದೇವರಿಗೆ ಪಂಚಾಮೃತಾಭಿಷೇಕ , ಬೆಳಿಗ್ಗೆ 7:30ಕ್ಕೆಗಣಪತಿ ಹವನ ನಡೆದು ಬೆಳಗ್ಗೆ 8.30 ರಿಂದ ನಿರಂತರ ಲಕ್ಷ ತುಳಸಿ ಅರ್ಚನೆಯು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತೃ ಅವರ ಮಾರ್ಗದರ್ಶನದಲ್ಲಿ ಸಂಪನಗೊಂಡಿತು. ಮಧ್ಯಾಹ್ನ 12:30 ಕ್ಕೆ ಶ್ರೀ ದೇವರ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಿತು. ಊರ ಪರವೂರ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು ದೇವಳಯದ ಆಡಳಿತ ಆಡಳಿತ ಮೊಕ್ತೇಸರರಾದ ಡಾ.ಕೆ.ಸಿ ನ್ಯಾಕ್‍ಮೊಕ್ತೇಸರರಾದ ಸಗುಣಾ .ಸಿ. ನ್ಯಾಕ್, ಡಾ.ಎಂ ಬಿ ಪುರಾಣಿಕ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಎ .ಕೆ. ಪುರುಷೋತ್ತಮ ಉಪಸ್ಥಿತರಿದ್ದರು.