ಮಂಗಳೂರು: ಶಕ್ತಿ ನಗರದ ಶಕ್ತಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಶಾಸ್ತಾ ನಾೈಕ್ ವಿ. ರಿಜನರೋನ್ ಇಂಟರನ್ಯಾಶನಲ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಫೇರ್-2024 ((SEF)) ಗೆ ಆಯ್ಕೆಯಾಗಿದ್ದಾನೆ. ಈ ಉತ್ಸವವವು ದಿನಾಂಕ ಮೇ 12 ರಿಂದ 17ರ ವರೆಗೆ ಅಮೇರಿಕಾದ ಲಾಸ್‍ಎಂಜಿಲಸ್, ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ.
ಜನವರಿ 28ರಿಂದ 31ರ ವರೆಗೆ ದೆಹಲಿಯಲ್ಲಿ ಆSಖಿ ಮತ್ತು ಭಾರತ ಸರಕಾರದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ENERGY: SUSTAINABLE MATERIAL DESIGN ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಶಾಲೆಯ ವಿಜ್ಞಾನ ಶಿಕ್ಷಕಿ ಚೈತ್ರಾ ಭಂಡಾರಿ ಮಾರ್ಗದರ್ಶನ ನೀಡಿದ್ದಾರೆ. ಶ್ರೀನಾಥ್ ನ್ಯಾಕ್ ವಿ. ಹಾಗೂ ಚಂದ್ರಿಕಾ ಶ್ರೀನಾಥ್ ದಂಪತಿಗಳ ಪುತ್ರನಾದ ಇವನ ಸಾಧನೆಗೆ ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿಗಳಾದ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಹಾಗೂ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಶಾಸ್ತಾ ನಾೈಕ್ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.