ಮಂಗಳೂರಿನ ಮೂರು ಮಹಡಿಗಳ ಕ್ರೀಡಾ ಹಾಸ್ಟೆಲ್ ಕೆಲಸ ಮುಗಿದಿದ್ದು, ವಿದ್ಯುತ್ ಮತ್ತು ನೀರು ಸಂಪರ್ಕದಂತಾ ಕೆಲಸಗಳು ಮಾತ್ರ ಬಾಕಿ ಇವೆ. ಇನ್ನು ಒಂದೂವರೆ ತಿಂಗಳಲ್ಲಿ ಉದ್ಘಾಟನೆ ಕಾಣಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಮಂತ್ರಿ ಬಿ. ನಾಗೇಂದ್ರ ವಿಧಾನ ಪರಿಷತ್ತಿನಲ್ಲಿ ಹೇಳಿದರು.
ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಆಗುವ ಬಾಲಕಿಯರ ಕ್ರೀಡಾ ಹಾಸ್ಟೆಲಿಗೆ ಈಗಾಗಲೇ 1.4 ಕೋಟಿ ರೂಪಾಯಿ ಬಿಡುಗಡೆ ಆಗಿದೆ ಎಂದೂ ಅವರು ಪ್ರತಾಪಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.
ಮಂಗಳೂರಿನ ಮಂಗಳ ಕ್ರೀಡಾ ಸಮುಚ್ಚಯದ ಕ್ರೀಡಾ ಹಾಸ್ಟೆಲ್‌ನಲ್ಲಿ 33 ಬಾಲಕರು, 14 ಬಾಲಕಿಯರು ಎಂದು 47 ಜನರು ಹಾಲಿ ತರಬೇತಿ ಪಡೆಯುತ್ತಿರುವುದಾಗಿಯೂ ಅವರು ಹೇಳಿದರು.