ನವದೆಹಲಿ: ಯಮುನಾ ನದಿಯ ನೀರಿನ ಮಟ್ಟ ನಿಧಾನವಾಗಿ ಇಳಿಯುತ್ತಿದ್ದರೂ ದಿಲ್ಲಿಯ ಹಲವು ಪ್ರದೇಶಗಳು ಜಲಾವೃತವಾಗಿವೆ. ನೆರೆಯ ನೀರು ದಿಲ್ಲಿಯಲ್ಲಿರುವ  ಸುಪ್ರೀಂ ಕೋರ್ಟ್ ನ ಪ್ರವೇಶ ದ್ವಾರಕ್ಕೆ ತಲುಪಿದೆ.  

ಕೆಂಪು ಕೋಟೆಯ ಆಸುಪಾಸಿನ ಎಲ್ಲಾ ರೋಡ್ ಗಳು ಜಲವೃತಗೊಂಡಿದ್ದು, ಯಮುನಾ ನದಿಯ ಪ್ರವಾಹದ ರಭಸಕ್ಕೆ ಇಂದ್ರಪ್ರಸ್ಥದಲ್ಲಿರುವ ನೀರಿನ ರೆಗ್ಯುಲೇಟರ್ ಗೆ ಹಾನಿ ಉಂಟಾಗಿದೆ ಎಂದು ವರದಿ ತಿಳಿಸಿದೆ.