ಮಂಗಳೂರಿನಲ್ಲಿ ಇಂದು ಬೇಕ್ ವಾಕ್ ಪ್ಯಾಕ್‌ಗಳು ಹಲವಾರಿವೆ. ಆದರೆ ನೂರು ದಾಟಿದ ವಾಸ್, ನೂರರ ಬಳಿ ಬಂದಿರುವ ಸಿಟಿ ಇಲ್ಲಿದ್ದರೂ ಇಲ್ಲಿನ ಬೇಕರಿಯ ಇತಿಹಾಸ ಸ್ಪಷ್ಟವಿಲ್ಲ.

ಪಶ್ಚಿಮ ಏಶಿಯಾ ಮತ್ತು ಈಜಿಪ್ತ್‌ನಲ್ಲಿ 6 ಸಾವಿರ ವರುಷಗಳ ಹಿಂದೆ ಆರಂಭವಾದ ದೊರಗು ಬ್ರೆಡ್ ಬೇಯಿಸುವಿಕೆ ಇಂದು ನಾನಾ ನವೀನತೆಯ ನೆರವಿನಲ್ಲಿದೆ.

ಬೇಕ್ ಎಂದರೆ ಆಹಾರವನ್ನು ಬೇಯಿಸದೆ, ಸುಡದೆ, ಕರಿಯದೆ,  ಕಾಯಿಸದೆ, ಬಿಸಿಯಿಂದ ಬೇಯಿಸುವುದಾಗಿದೆ. ಭಾರತದಲ್ಲಿ ಮೊದಲು ಬೇಕರಿ ಪರಿಚಯಿಸಿದವರು ಪೋರ್ಚುಗೀಸರು. ಅವರಿಂದ ಪಾರಸಿಗಳು, ಮುಸ್ಲಿಮರು, ಕ್ರಿಶ್ಚಿಯನರು, ಆಬಳಿಕ ಹಿಂದುಗಳು ಬೇಕರಿ ತೆರೆದರು.

ಮಂಗಳೂರಿನ ವಾಸ್ ಬೇಕರಿ ‌1905ರಲ್ಲಿ ಆರಂಭವಾಗಿದ್ದು, ಅಯ್ದು ತಲೆಮಾರು ಕಂಡಿದೆ; 116 ವರುಷ ಕಂಡಿದೆ.

ಮಂಗಳೂರಿನ ಸಿಟಿ ಬೇಕರಿ 96ನೇ ವರುಷದಲ್ಲಿದೆ. ಪಾಂಡೇಶ್ವರ ಮತ್ತು ಕಂಕನಾಡಿಯಲ್ಲಿ ಶತಮಾನಗಳ ಹಿಂದೆ ಬೇಕರಿಗಳು ಆರಂಭವಾದರೂ ಅವೆಲ್ಲ ಕಯ್ ಬದಲಾಗಿವೆ ಎನ್ನುತ್ತಾರೆ. ಸ್ಪಷ್ಟ ಮಾಹಿತಿ ಈಗಿರುವವರಲ್ಲಿ ಇಲ್ಲ.

ಬೇಕರಿಯ ಬ್ರೆಡ್ ಮುಂದೆ ಬಿಸ್ಕತ್ತು, ಕೂಕಿ, ಕೇಕು ಎಂದು ನಾನಾ ವೇಷಗಳಲ್ಲಿ ನಾನಾ ಆಕರ್ಷಣೆಗಳಲ್ಲಿ ಬರುತ್ತಿದೆ.

ನಾನು ಸಣ್ಣವನಿದ್ದಾಗ ನಮ್ಮ ಕಡೆ ಮಿಶನ್‌ಗಳ (ಪ್ರೊಟೆಸ್ಟೆಂಟ್) ಬೇಕರಿ. ಹತ್ತು ಗಂಟೆ ಹೊತ್ತಿಗೆ ಪರಿಮಳ ಬಂದರೆ ಹೊಸ ಬ್ರೆಡ್, ಬನ್ ಸಿದ್ಧ. ಸಂಜೆ ಉಳಿದರೆ ಕೂಡಲೆ ರಸ್ಕ್. ಇಂದಿನದು ನಾಳೆಗೆ ಎಂಬುದೆಲ್ಲ ಇರಲಿಲ್ಲ.

ಬ್ರೆಡ್ ಮೂಲದ ಪಿಜ್ಜಾ, ಬರ್ಗರ್, ಐಸ್ ಕೇಕ್ ಇಂದು ವೈವಿಧ್ಯಗಳಿಗೆ ಲೆಕ್ಕವಿಲ್ಲ. ಅವನ್ನು ಮಾಡಿ ಎಷ್ಟು ಕಾಲವೋ, ಮಾರುವವನು ಮಾತ್ರ ಈಗ ಮಾಡಿದ್ದು ಎನ್ನುತ್ತಾನೆ.


-By ಪೇಜಾ