ಲೇಖಕ
- ನಾಗೇಶ್ ಗಡಿಗೇಶ್ವರ
(ಮಸಣದ ಕಾವಲುಗಾರ)
ಯಾವುದು ಎಲ್ಲಿ ಎಂತ ಎಡವುದು ಎಂಬ ಪ್ರಶ್ನೆಗಳು ಬಂದಾಗ ನಮ್ಮ ಸುತ್ತ ಮುತ್ತಲಿನ ಸಮಾಜದಲ್ಲಿ ಅವರು ಸರಿ ಇಲ್ಲ ಇವರು ಸರಿ ಇಲ್ಲ ಎಂದು ದೂಷಣೆ ಮಾಡುತ್ತ ಬರುತ್ತಿದ್ದೇವೆ.
ಹಾಗಾದರೆ ಇಲ್ಲಿ ಸರಿಯಿರುವುದಾದರೂ ಯಾರು....? ಕೆಲವು ಗಳಿಗೆ ಸರಿಯಿದ್ದು ಕೆಲವು ಗಳಿಗೆ ಸರಿಯಿಲ್ಲದವರಾ...? ಅಥವಾ ಯಾವುದೇ ಗೋಜಿಗೆ ಹೋಗದೆ ತನ್ನ ಪಾಡಿಗೆ ತಾನು ಇರುವವರಾ....? ಇದನ್ನು ವಿಶ್ಲೇಷಣೆ ಮಾಡುತ್ತಾ ಹೋದಾಗ ಯಾರು ಯಾವ ಕ್ಷೇತ್ರಗಳಲ್ಲಿ ಅನ್ನುವುದಕ್ಕಿಂತ ಯಾರು ಯಾವುದರಲ್ಲಿ ಎಡವುತ್ತಿದ್ದೇವೆ ಎನ್ನುವುದು ನಾವು ಪರಿಗಣಿಸಬೇಕಾಗುತ್ತದೆ.
ಕಲುಷಿತ ಸಮಾಜ ಸೃಷ್ಟಿಯಾಗಲು ಕಾರಣ ಒಬ್ಬರಲ್ಲ, ಇದು ಎಲ್ಲರಿಂದ ಆಗುವ ಪ್ರಮಾದ. ತಾಯಿಯು ಗರ್ಭಾವಸ್ಥೆಯಲ್ಲಿರುವಾಗ ಮಗುವಿಗೆ ಸರಿಯಾದ ರೀತಿಯ ಪೋಷಕಾಂಶದ ಪೂರೈಕೆಯಾಗದ ಕೊರತೆಯಿಂದ ಜನಿಸಿದ ಮಗುವು, ಹೇಳಿದ್ದು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಹಾಗೇ ಮೊಬೈಲ್ ತರಂಗಗಳು ಭ್ರೂಣಾವಸ್ಥೆಯಲ್ಲಿರುವಾಗಲೆ ಮಗುವಿನ ಮೇಲೆ ಅತಿ ಬೇಗ ಪರಿಣಾಮ ಬೀರುವುದು. ಕೆಲವು ಮಕ್ಕಳು ಬಾಲ್ಯದಲ್ಲೆ ಅತಿ ಬುದ್ದಿವಂತರಂತೆ ಕಂಡರು ಕೆಲವು ವಿಷಯಗಳನ್ನು ಎದುರಿಸಲು ಆಗದ ಅತಿ ಸೂಕ್ಷ್ಮಮತಿಗಳಾಗಿರುತ್ತಾರೆ.
ಕಾರಣ ನಾವು ಸೇವಿಸುವ ಕಲುಷಿತ ಆಹಾರಗಳು ಮತ್ತು ಅಹಿತಕರ ಆಹಾರಪದ್ದತಿಗಳು. ಕೇವಲ ಮಕ್ಕಳಲ್ಲಿ ಅಲ್ಲದೆ ತಂದೆ ತಾಯಿಗಳ ಮೇಲೂ ಪರಿಣಾಮ ಬೀರುತ್ತದೆ. ಇಂಥಹ ಸಮಸ್ಯೆಗಳಿಗೆ ಕಾರಣರು ಯಾರು......?
ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವ ಬದಲು ಪ್ರೀತಿ ಪ್ರೇಮ ಎಂದು ಬೇಗ ಮದುವೆಯಾಗಿ ತಾನು ಬದುಕಿನಲ್ಲಿ ಪಳಗಿ ಪ್ರಬುದ್ಧನಾಗುವುದರ ಮೊದಲೇ ಇನ್ನೊಂದು ಮಗುವಿಗೆ ಜನ್ಮ ಕೊಟ್ಟು ತಾನು ಮಾಡಿದ್ದೆ ಸರಿಯೆಂಬಂತೆ ಹುಟ್ಟುವ ಮಕ್ಕಳನ್ನು ಬರಿ ದೈಹಿಕವಾಗಿ ಬೆಳೆಸುತ್ತಾರೆ ಹೊರತು ಸಂಸ್ಕಾರದ ಹೊದಿಕೆ ಅವರಿಗೆ ತೊಡಿಸುವುದಿಲ್ಲ.
ಅವರ ಕುಟುಂಬದಲ್ಲಿ ಹಿರಿಯರು ಯಾರು ಇರುವುದಿಲ್ಲ. ಸ್ವತಂತ್ರ ಬದುಕನ್ನು ನಾವು ಕಟ್ಟಿಕೊಳ್ಳುತ್ತೇವೆಂದು ಮಕ್ಕಳ ಮೇಲೆ ಒತ್ತಡ ಹಾಕಿ, ಮಕ್ಕಳು ಪೋಷಕರ ಕಿರುಕುಳದಿಂದ ಹೊರ ಬರಲು ಬೇರೆ ಮಾರ್ಗವನ್ನು ಹಿಡಿಯುತ್ತಾರೆ.
ಹಿಂದಿನಂತೆ ಕುಟುಂಬಗಳು ಇಲ್ಲದೆ ನೆಂಟರ ಮನೆ, ಅಣ್ಣ, ತಮ್ಮ, ಮಾವ, ಚಿಕ್ಕಪ್ಪ ಎಂಬ ಬಾಂಧವ್ಯಗಳಿಲ್ಲದೆ ಹಾಗೂ ಮನೆಯಲ್ಲಿ ಸರಿಯಾದ ರೀತಿಯಲ್ಲಿ ನಿಯಮಗಳಿಲ್ಲದೆ, ಆಚಾರ ವಿಚಾರಗಳಿಲ್ಲದೆ, ಪೂಜೆ ಭಕ್ತಿ ಭಯಗಳಿಲ್ಲದೆ, ನೀತಿಯುಕ್ತ ಕಥೆಯನ್ನು ಹಿರಿಯರು ಕಿರಿಯರಿಗೆ ಹೇಳುವುದಿಲ್ಲದೆ, ಮೌಲ್ಯಯುತ ಸಂಬಂಧಗಳು ಪರಿಚಯವಾಗದೆ... ಹುಡುಗ ಅಥವಾ ಹುಡುಗಿ ಅನ್ಯರೊಂದಿಗೆ ಗೆಳೆತನ ಬಯಸಿ ತನ್ನ ನೋವು ನಲಿವುಗಳನ್ನು ಹಂಚುತ್ತ ತನಗರಿವಿಲ್ಲದೆ ಮೋಸ ಹೋಗುತ್ತ ಅಪ್ರಾಪ್ತ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಥವಾ ದುಶ್ಚಟಗಳಿಗೆ ಬಲಿಯಾಗುತ್ತಾರೆ..
ಈಗ ಎಲ್ಲರೂ ಸೇರಿ ಮದುವೆ ಮಾಡಿದರು ಕೂಡ... ಕೆಲಸ ಪ್ರೇವೆಸಿ ..ಟ್ರಾನ್ಸ್ ಫರ್ ಅಂತ . ಬೇರೆ ಕಡೆ ರವಾನೆ ಆಗಿ ಕೆಲಸದ ಒತ್ತಡ ಅಂತ ಎಲ್ಲಾ ಮರೆತು ತನ್ನ ಜೀವನ ಹಾಗೂ ತನ್ನ ಮಕ್ಕಳ ಜೀವನ ಹಾಳುಗೆಡುವುತ್ತಾರೆ ಇಲ್ಲಿ ತಪ್ಪು ಮಾಡಿದವರು ಯಾರು.....? ಶಿಕ್ಷಣ ಮಕ್ಕಳಿಗೆ ಬೇಕೋ....? ಅಥವಾ ಪೋಷಕರಿಗೆ ಬೇಕೋ...? ಅಥವಾ ಇಬ್ಬರಿಗೂ ಬೇಕೋ...? ನಿಯಮ ಬದ್ಧವಲ್ಲದ ಬದುಕು...ಹೀಗೆ ಮುಂದುವರೆದರೆ ಮನುಕುಲವಾಗದೆ....ರಾಕ್ಷಸರ ....ನೆಲವಾಗುವುದಕ್ಕೆ ಹೆಚ್ಚು ದಿನಗಳು ಬೇಕಿಲ್ಲ...