ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಕಳೆದ ನೂರು ವರ್ಷಗಳಿಂದ ಭಾರತದ ಸಾಮಾಜಿಕ, ಧಾರ್ಮಿಕ ಅಸ್ಮಿತೆಗೆ ಧಕ್ಕೆ ಬಾರದಂತೆ ರಾಷ್ಟ್ರಕಾರ್ಯಕ್ಕೆ ತನ್ನನ್ನು ತಾನು ಸಮರ್ಪಸಿರುವ ನಮ್ಮ ಹೆಮ್ಮೆಯ ವಿಶ್ವದ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧ ಮಾಡುತ್ತೇವೆ ಎಂದು ಉದ್ದಟತನದ ಹೇಳಿಕೆಯನ್ನು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಖಂಡಿಸುತ್ತೇನೆ..
ದೇಶದಲ್ಲಿ ಎಲ್ಲಿಯೇ ಪ್ರಾಕೃತಿಕ ವಿಕೋಪವಾಗಲಿ ಅಥವಾ ಯಾವುದೇ ಸಮಸ್ಯೆಯಾಗಲಿ ಅಲ್ಲಿ ತಕ್ಷಣ ಸಂಘ ಹಾಜರಾಗಿರುತ್ತದೆ,1962 ರ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಹಾಗೂ ಯೋಧರಿಗೆ ಬೆನ್ನಿಗೆ ಬೆನ್ನಾಗಿ ನಿಂತದ್ದು ಇದೇ ಸಂಘ. ಈ ಕಾರ್ಯವನ್ನು ಮೆಚ್ಚಿಯೇ ನೆಹರುರವರು ಗಣರಾಜ್ಯೋತ್ಸವದಲ್ಲಿ ಸ್ವಯಂಸೇವಕರಿಗೆ ಪಥ ಸಂಚಲನ ಮಾಡಲು ಅವಕಾಶ ನೀಡಿದ್ದರು..
ಯಾವುದೋ ಪೂರ್ವಗ್ರಹ ಹಾಗೂ ಅಧಿಕಾರದ ಮದದಿಂದ ನೀಡಿರುವ ಈ ಹೇಳಿಕೆ ನಿಮ್ಮ ಹುದ್ದೆಗೆ ಘನತೆ ತರುವಂತಹದ್ದಲ್ಲ..
ನಿಮ್ಮ ಪಕ್ಷ ಮತ್ತೊಮ್ಮೆ ಅಲ್ಲ ನೂರು ಬಾರಿ ಅಧಿಕಾರಕ್ಕೆ ಬಂದರೂ ಸಂಘವನ್ನು ನಿಷೇಧ ಮಾಡಲು ಸಾಧ್ಯವಿಲ್ಲ..