ಬದುಕಿನಲ್ಲಿ ಯಾವತ್ತಾದರೂ ಒತ್ತಡದಲ್ಲಿ ಮುಳುಗಿದಾಗ ಅದರಿಂದ ಹೊರ ಬರದೆ ಇರುವಾಗ ಒಬ್ಬ ಯೋಧನಿಂದ ಕಲಿಯಲೆ ಬೇಕಂತೆ ಒತ್ತಡಗಳಿಂದ ಹೊರಬಂದು ಬದುಕನ್ನು ಪ್ರೀತಿಸುವುದು. ಅಂಗೈಯಲ್ಲಿ ಜೀವ ಹಿಡಿದು ನಗುವುದು ನಗಿಸುವುದು...ನಗು ಹಂಚುವುದು ಪ್ರತಿ ದಿನ ಹೊಸದೆಂಬಂತೆ ಬದುಕುವುದು... ತ್ಯಾಗ ದೇಶಭಕ್ತಿ ಸೂಕ್ಷ್ಮತೆ ನಿಸ್ವಾರ್ಥ ಮನೊಭಾವ.. ಇವರನ್ನು ಕಂಡು ಅಕ್ಷರ ಸಹ ಸತ್ಯವೆನಿಸಿತು...
Photo Curtesy from PTI
ಅಕ್ಷರಗಳನ್ನ ಪ್ರೀತಿಸುವಂತಹ ಒಂದು ವೇದಿಕೆಯಲ್ಲಿ ಸಹಬರಹಗಾರರನ್ನು ಪ್ರೋತ್ಸಾಹಿಸುವ ಒಬ್ಬ ಬರಹಗಾರಾದ ಈ ಮಸಣದ ಕಾವಲುಗಾರ ಇದೇನು ಕಾವ್ಯನಾಮ ಹೀಗಿದೆ ಅನಿಸಿದ್ದು ನಿಜದೇಹವೆಂಬ ಮಸಣದಲ್ಲಿ ಪ್ರತಿದಿನ ಭಾವನೆಗಳು ಸತ್ತು ಹೋಗುವುದು ಅವನ್ನು ಕಾಯುವವನಾ ಮಸಣದ ಕಾವಲುಗಾರ ಅಂತ ಅವರ ಪ್ರತಿಕ್ರಿಯೆ. ಅವರನ್ನು ಗುಮ್ಮ ಮತ್ತು ಅಮ್ಮ ಅಂತಾನು ಕರಿತಿಯುತ್ತಿದ್ದರು. ಎಲ್ಲರೊಂದಿಗೆ ಬೆರೆಯುವ ಸ್ನೇಹಿತನನ್ನ ಅವರು ತಮಾಷೆಯಿಂದ ಕರೆಯೊದು ಹೀಗೆ ಅಂದುಕೊಂಡಿದ್ದೆ ಇದರ ನಿಜವಾದ ಒಳಾರ್ಥ ಗುರುವಿನಂಥ ಅಮ್ಮ ಅಂತ.
ಸಾಹಿತ್ಯ ಪ್ರೇಮಿಗಳಿಗೆ ಕವನ ಕವಿತೆ ಸಿಹಿ ಹೂರಣದೊಂದಿಗೆ ಬದುಕಿನ ಸಾರವನ್ನು ತಿಳಿಸುವ ಇವರ ಬರಹ ಲೇಖನ ಕವಿತೆ ಪುಸ್ತಕ ಹಾಗೂ ಪತ್ರಿಕೆಗಳಲ್ಲೂ ಬಂದಿದ್ದಾವೆ. ಅವರೆಂದರೆ ಅರ್ಥವಾಗದ ನಿಘಂಟು ತಿಳಿದಷ್ಟು ಕಡಿಮೆನೆ. ಮಾತಮಾತಲ್ಲಿಯೂ ಕವಿಯಾಗತಾರೆ..ಮಾತಿನಲ್ಲಿಯೆ ಮನಸ್ಸಿನ ಮಾತು ನಾವು ಹೇಳದೆ ತಿಳಿದುಕೊಳ್ಳುವ ಸೂಕ್ಷ್ಮತೆಯೂ ಅವರಲ್ಲಿದೆ.
ನಗಿಸುವುದರಲ್ಲಿ ಹೊಟ್ಟೆ ಹುಣ್ಣಾಗಿಸುವ ಹಾಸ್ಯಗಾರ ಬದುಕಿನ ಸಾರ ಬರಹಗಳಲ್ಲಿ ಹರಿಸುವ ಜ್ಞಾನ ಸಾಗರ ಮಾತಲ್ಲಿ ಧೃಡ ನಿಲುವು ಸೋಲದವರು ಮಸ್ತಕದಲ್ಲಿ ಜ್ಞಾನ ತುಂಬುತ್ತ ನಗು ಹಂಚುತ್ತ ಎಲ್ಲರ ಜೊತೆ ಸ್ನೇಹದಿಂದ ಬೆರೆಯುವ ನಿರ್ಗವಿ... ಯಾರಿಗೂ ಅಂಟಿಕೊಳ್ಳದ ಅಲೆಮಾರಿಯೂ ಹೌದು.
ಹೇಳತಾ ಹೋದರೆ ಸಾಕಷ್ಟು ಇವೆ...ಬಿಡುವಿರದ ಕೆಲಸದಲ್ಲೂ ಸಾಹಿತ್ಯ ಸೇವೆ ಮಾಡುತ ಪ್ರೋತ್ಸಾಹಿಸುವರು. ಮೆಚ್ಚುಗೆಗಾಗಿ ಬರಿಬೇಡ ನಿನ್ನ ಜೀವನ ಬೆಳಿಕಿಗಾಗಿ ಬರಿರಿ ಅಳುವುದನ್ನೆ ಬರಿಬೇಡಿ ಆಳುವುದನ್ನು ಕಲಿ ಧನಾತ್ಮಕವಾಗಿ ಯೋಚಿಸಿ ಬರಹಗಾರ ಸಾಮಾನ್ಯರಂತಲ್ಲ ಅನ್ನುವ ಅವರ ಪ್ರತಿ ಮಾತು ಅಕ್ಷರ ಸಹ ಸತ್ಯ
ಬರವಣಿಗೆಯ ನನ್ನ ಈ ಹವ್ಯಾಸದಿಂದ ಪರಿಚಯವಾದ ಸ್ನೇಹಿಮಹಿ ವಿಶ್ವಾಸಮಯಿ ಬರಹಗಾರ. ಪದಗಳಿಗೆ ಸಿಗದ ವ್ಯಕ್ತಿತ್ವವೆ ಸರಿ
ಕಾರ್ಗಿಲ್ ಯುದ್ಧದ ವಿಜಯೋತ್ಸವದ ದಿನದಂದೆ ಅವರ ಹುಟ್ಟು ಹಬ್ಬ ಕೂಡ..ಪ್ರತಿ ಹುಟ್ಟಿದ ದಿನ ಹೊಸದೆಂದು ಹೇಳುವರು ಆದರೆ ಪ್ರತಿದಿನವೂ ಹೊಸದೆಂಬಂತೆ ಜೀವಿಸುವ ನಿಮಗ ಶುಭಾಶಯ ನಮ್ಮ ರಕ್ಷಿಸುವುದಕ್ಕಾಗಿ ಪ್ರತಿ ದಿನ ದಣಿಯದಿರುವ ಜೀವಕ್ಕೆ ಪ್ರತಿಕ್ಷಣವೂ ಭಗವಂತನ ಶ್ರೀರಕ್ಷೆ ಇರಲಿ.
-By ಅಂಜಲಿ ಶಿದ್ಲಿಂಗ್