ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮಂಗಳೂರು ಭಾರತೀಯ ಕ್ಯಾನ್ಸರ್ ಸೊಸೈಟಿ, ಎಜೆ ಆಸ್ಪತ್ರೆ, ಎ ಜಿ ಕ್ಯಾನ್ಸರ್ ವಿದ್ಯಾಸಂಸ್ಥೆ ಹಾಗೂ ಕೆ ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಗಸ್ಟ್ 24ರಂದು ಬೆಳಗ್ಗೆ ಗಂ. 9 ಕ್ಕೆ ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಮೂಡುಬಿದಿರೆಯ ಎಲ್ಲಾ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕ್ಯಾನ್ಸರ್ ತಪಾಸಣೆಯ ಶಿಬಿರವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಮಾರಕ ಆರೋಗ್ಯ ಸಮಸ್ಯೆಗಳ ಸಂಪೂರ್ಣ ಮಾಹಿತಿ, ಪರಿಹಾರ ಇತ್ಯಾದಿಗಳನ್ನು ತಿಳಿಸಲಾಗುವುದು. ಇದರಿಂದಾಗಿ ಅವರ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆಯಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಕೂಡ ಸಹಕಾರವನ್ನು ನೀಡಲಿದೆ ಎಂದು ಡಾ. ಅಮರಶ್ರೀ ಅಮರನಾಥ ಶೆಟ್ಟಿ ತಿಳಿಸಿದ್ದಾರೆ.