ಕಾರ್ಕಳ ತಾಲೂಕು ಸಹಕಾರ ಭಾರತಿ ಅಭ್ಯಾಸ ವರ್ಗವು ಡಿಸೆಂಬರ್ 13 ಶನಿವಾರ 2025 ರಂದು ಜೋಡುರಸ್ತೆಯ ರಾಜಾಪುರ ಸಾರಸ್ವತ ಸೊಸೈಟಿಯ ಸಭಾಭವನದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದ ಸಭೆಯನ್ನು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಸ್ಟದ ಸಂಚಾಲಕರಾದ ಬೋಳ ಸದಾಶಿವ ಶೆಟ್ಟಿಯವರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಾ, ಕಳೆದ 46 ವರ್ಷಗಳಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಸುಮಾರು 700 ಜಿಲ್ಲೆಗಳಲ್ಲಿ ಸಂಘಟನಾ ಜಾಲವನ್ನು ವಿಸ್ತರಿಸಿರುವ ಸಹಕಾರ ಭಾರತಿ, ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ನಿರಂತರ ಕಾರ್ಯೋನ್ಮುಖವಾಗಿದೆ ಮುಖ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ರವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ಸಹಕಾರ ರತ್ನ ಕಡಾರಿ ರವೀಂದ್ರ ಪ್ರಭು, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀಶ್ ನಾಯಕ್ ಉಪಸ್ಥಿತರಿದ್ದರು.
"ಸಹಕಾರ ಭಾರತಿ ಪರಿಚಯ, ಸಹಕಾರಿ ಕಾಯ್ದೆಗಳು ಮತ್ತು ನಿರ್ದೇಶಕರ ಜವಾಬ್ದಾರಿ" ಈ ವಿಷಯದ ಬಗ್ಗೆ ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಸವಿವರವಾದ ಮಾಹಿತಿ ಮಾರ್ಗದರ್ಶನ ನೀಡಿದರು.
"ಕಾರ್ಯಕರ್ತ - ಕಾರ್ಯಪದ್ಧತಿ, ಪಂಚಪರಿವರ್ತನೆ- ಸಂಘ ಶತಾಬ್ದಿ" ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಪ್ರಚಾರಕರಾದ ಅವನೀಶ್ ರವರು ಉಪನ್ಯಾಸ ಮಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ರವರು ವಹಿಸಿದರು. ಮುಖ್ಯ ಅತಿಥಿ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿಯವರು ಸಮಾರೋಪ ನುಡಿಗಳನ್ನಾಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕಲ್ಯಾ ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ಸುದೀಪ್ ನಿಟ್ಟೆಯವರು ಧನ್ಯವಾದ ಸಮರ್ಪಣೆ ಮಾಡಿದರು.
ಜಿಲ್ಲಾ ಉಪಾಧ್ಯಕ್ಷರಾದ ಮುಂಡ್ಕೂರು ರಘುವೀರ್ ಶೆಣೈ ಯವರು ಕಾರ್ಯಕ್ರಮ ನಿರೂಪಿಸಿದರು.
ಅಭ್ಯಾಸ ವರ್ಗದಲ್ಲಿ ಕಾರ್ಕಳ ತಾಲೂಕಿನ 16 ವಿವಿಧ ಸಹಕಾರಿ ಸಂಸ್ಥೆಗಳಿಂದ 40 ಮಂದಿ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳು ಹಾಗೂ ಸಹಕಾರಿಗಳು ಭಾಗವಹಿಸಿದ್ದರು.