ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ, ಕಾಸಗಿ, ಅನುದಾನಿತ, ಅನುದಾನರಹಿತ ಎಂದು ಹತ್ತು ಶಾಲೆಗಳಿಗೆ ಒಬ್ಬ ವಿದ್ಯಾರ್ಥಿ ಕೂಡ ದಾಖಲಾತಿ ಪಡೆದಿಲ್ಲ ಎಂದು ಜಿಲ್ಲಾ ಡಿಡಿಪಿಐ ದಯಾನಂದ ಅವರು ತಿಳಿಸಿದ್ದಾರೆ.
ಮೂಡಬಿದಿರೆಯಲ್ಲಿ 4, ಸುಳ್ಯದಲ್ಲಿ 2, ಮಂಗಳೂರು ಉತ್ತರದಲ್ಲಿ 2, ಮಂಗಳೂರು ದಕ್ಷಿಣದಲ್ಲಿ 1 ಹಾಗೂ ಬಂಟ್ವಾಳದಲ್ಲಿ 1 ವಿದ್ಯಾರ್ಥಿ ದಾಖಲಾತಿ ಕಾಣದ ಶಾಲೆಗಳು ಇವೆ. ಇವೆಲ್ಲ ನಗರ ಪ್ರದೇಶದ ಶಾಲೆಗಳು. ಇಂಗ್ಲಿಷ್ ಶಿಕ್ಷಣಕ್ಕೆ ಜನರು ಒತ್ತು ಕೊಡುತ್ತಿರುವುದು ಕಂಡು ಬರುತ್ತಿದೆ.