ಪಡುವಣ ಬಂಗಾಳದ 7, ಗುಜರಾತಿನ 3, ಗೋವಾದ 2 ರಾಜ್ಯ ಸಭಾ ಚುನಾವಣೆಗೆ ನಿಶ್ಚಿತ ಸಂಖ್ಯೆಯವರು ಮಾತ್ರ ಸ್ಪರ್ಧಿಸಿರುವುದರಿಂದ ಅವರೆಲ್ಲ ಅವಿರೋಧವಾಗಿ ಆಯ್ಕೆಯಾದರು. ಜುಲಾಯಿ 24ರಂದು ಚುನಾವಣೆ ಎಂದು ಘೋಷಣೆ ಆಗಿತ್ತು. ಈಗ ಅಂದು ಅಧಿಕೃತವಾಗಿ ಘೋಷಣೆ ಮಾಡುವುದಷ್ಟೆ ಬಾಕಿ.
ಕೇಂದ್ರ ವಿದೇಶಾಂಗ ಮಂತ್ರಿ ಜೈಶಂಕರ್ ಮತ್ತು ತೃಣಮೂಲ ಕಾಂಗ್ರೆಸ್ಸಿನ ಹಿರಿಯ ಸದಸ್ಯ ಡೆರೆಕ್ ಓಬ್ರಿಯಾನ್ ಎರಡನೆಯ ಅವಧಿಗೆ ರಾಜ್ಯ ಸಭೆಗೆ ಆಯ್ಕೆಯಾದರು. ಜಮ್ಮು ಮತ್ತು ಕಾಶ್ಮೀರದ 4, ನಾಮ ನಿರ್ದೇಶನದ 2 ಮತ್ತು ಉತ್ತರ ಪ್ರದೇಶದ 1 ಸ್ಥಾನ ಇನ್ನೂ ಕಾಲಿ ಇವೆ. ರಾಜ್ಯ ಸಭೆಯು 245 ಸ್ಥಾನ ಬಲ ಹೊಂದಿದೆ. ಬಿಜೆಪಿ ನಾಯಕತ್ವ ಕೂಟದ ಒಟ್ಟು ರಾಜ್ಯ ಸಭಾ ಸದಸ್ಯರ ಸಂಖ್ಯೆಯು 105ಕ್ಕೆ ಏರಿತು.