ಮೂಡುಬಿದಿರೆ: ಐ.ಸಿ.ವೈ.ಎಂ. ಮೂಡುಬಿದಿರೆ ಘಟಕವು, ಐ.ಸಿ.ವೈ.ಎಂ. ಮೂಡುಬಿದಿರೆ ವಲಯ ಮತ್ತು ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದೊಂದಿಗೆ ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ಯಶಸ್ವಿ ವಾಕಥಾನ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 29 ರಂದು ಆಯೋಜಿಸಿತು. ಕಾರ್ಯಕ್ರಮವು ವಿದ್ಯಾಗಿರಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಯಿತು. ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂದನೀಯ ಗುರು ಅಶ್ವಿನ್ ಲೋಹಿತ್ ಕಾರ್ಡೋಜಾ ಮತ್ತು ಐ.ಸಿ.ವೈ.ಎಂ. ಮೂಡುಬಿದಿರೆ ಘಟಕದ ನಿರ್ದೇಶಕರಾದ ಅತೀ ವಂದನೀಯ ಗುರು ಓನಿಲ್ ಡಿಸೋಜಾ ಅವರು ಪಥಸಂಚಲನದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಈ ವಾಕಥಾನ್‌ನಲ್ಲಿ ಐ.ಸಿ.ವೈ.ಎಂ. ಕೇಂದ್ರಿಯ ಸಮಿತಿ ಸದಸ್ಯರು ಹಾಗೂ ಹಲವಾರು ಐ.ಸಿ.ವೈ.ಎಂ. ಘಟಕಗಳು ಸೇರಿದಂತೆ ಸುಮಾರು 200 ಯುವಕರು ಭಾಗವಹಿಸಿದ್ದರು.

ಐ.ಸಿ.ವೈ.ಎಂ. ಮಂಗಳೂರು ಕೇಂದ್ರಿಯ ಸಮಿತಿಯ ಅಧ್ಯಕ್ಷರಾದ ವಿನ್‌ಸ್ಟನ್ ಸಿಕ್ವೇರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು . ಮೆರವಣಿಗೆಯು ಪ್ರಧಾನ ಬ್ಯಾನರ್‌ನೊಂದಿಗೆ ಮತ್ತು ಐ.ಸಿ.ವೈ.ಎಂ. ಮೂಡುಬಿದಿರೆ ಘಟಕ, ವಲಯ ಮತ್ತು ಧರ್ಮಪ್ರಾಂತ್ಯದ ಧ್ವಜದೊಂದಿಗೆ ನಡೆದಿತು. ಡ್ರಗ್ ಜಾಗೃತಿಯ ಕುರಿತ ಶಕ್ತಿಯುತ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದ ಪಾಲ್ಗೊಳ್ಳುವವರೊಂದಿಗೆ, ನೀರು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ವಾಹನಗಳ ವ್ಯವಸ್ಥೆಯೂ ಮಾಡಲಾಗಿತ್ತು.

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ, ಐ.ಸಿ.ವೈ.ಎಂ. ಮೂಡುಬಿದಿರೆ ಘಟಕವು ಮಾದಕ ದ್ರವ್ಯ ಬಳಕೆಯ ಅಪಾಯಗಳನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಿತು. ನಂತರ, ಸಂಪನ್ಮೂಲ ವ್ಯಕ್ತಿ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28% ಯುವಕರು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಅಂಕಿಅಂಶವನ್ನು ಹಂಚಿಕೊಂಡರು ಮತ್ತು ಈ ಸಮಸ್ಯೆಯನ್ನು ನಿವಾರಿಸಲು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಸಮಾರೋಪ ಕಾರ್ಯಕ್ರಮವನ್ನು ಕೊರ್ಪುಸ್ ಕ್ರಿಸ್ಟಿ ಚರ್ಚ್‌ನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ವಂದನೀಯ ಗುರು ಅಶ್ವಿನ್ ಲೋಹಿತ್ ಕಾರ್ಡೋಜಾ, ಮತ್ತು ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಗುರು ಓನಿಲ್ ಡಿಸೋಜಾ, ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ವಿನ್‌ಸ್ಟನ್ ಸಿಕ್ವೇರಾ, ಐ.ಸಿ.ವೈ.ಎಂ. . ಮೂಡುಬಿದಿರೆ ಘಟಕದ ಅಧ್ಯಕ್ಷರಾದ ವಿಯಾನ್ ಡಿಸೋಜ, ಐ.ಸಿ.ವೈ.ಎಂ. ಮೂಡುಬಿದಿರೆ ವಲಯದ ಅಧ್ಯಕ್ಷರಾದ ಜೇವಿನ್ ಡಿಸೋಜ,ಐ.ಸಿ.ವೈ.ಎಂ ಮೂಡಬಿದ್ರಿ ಘಟಕದ ಸಂಚಾಲಕರಾದ ಕೆವಿನ್ ಡಿಸೋಜ ಮತ್ತು ರಾಯಸ್ಟನ್ ಪಿಂಟೋ, ಗೋಲ್ಡನ್ ಜ್ಯುಬಿಲಿ ಸಂಚಾಲಕರಾದ ವಿನ್ಸೆoಟ್ ಮಸ್ಕರೇನಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವಿಯಾನ್ ಡಿಸೋಜಾ ಅವರು ಸಭೆಯನ್ನು ಸ್ವಾಗತಿಸಿದರು, ನಂತರ ವಂದನೀಯ ಗುರು ಅಶ್ವಿನ್ ಲೋಹಿತ್ ಕಾರ್ಡೋಜಾ ಮತ್ತು ಅತಿ ವಂದನೀಯ ಗುರು ಓನಿಲ್ ಡಿಸೋಜಾ ಅವರ ಸ್ಪೂರ್ತಿದಾಯಕ ಭಾಷಣಗಳು ನಡೆಯಿತು, ಹಾಗೂ ಜೆವಿನ್ ಡಿಸೋಜಾ ಅವರಿಂದ ವಂದನಾರ್ಪಣೆ ಮಾಡಲಾಯಿತು. ಆಶ್ಲಿನ್ ಡಿಸೋಜ ಹಾಗೂ ನಿಶಲ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.
ಅಂತಿಮವಾಗಿ, ಎಲ್ಲಾ ಭಾಗವಹಿಸುವರು ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು ಗುಂಪು ಫೋಟೋ ತೆಗೆಸಿಕೊಂಡು ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯಿತು.