ಉಜಿರೆ:  ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪದವಿಪೂರ್ವ ಕಾಲೇಜುಗಳ ದಕ್ಷಿಣಕನ್ನಡ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಟೂರ್ನಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ.

ಫಲಿತಾಂಶ: ಅತಿಥೇಯ ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜು ತಂಡ (ದ್ವಿತೀಯ) ಉತ್ತಮ ರೈಡರ್: ಬಿಂದು, ಎಸ್.ಡಿ.ಎಂ. ಪಿ.ಯು. ಕಾಲೇಜು ಉಜಿರೆ. ಆಲ್ ರೌಂಡರ್ ಆಟಗಾರ್ತಿ: ಪ್ರಾನ್ವಿಕ, ಆಳ್ವಾಸ್ ಪಿ.ಯು. ಕಾಲೇಜು, ಮೂಡಬಿದ್ರೆ ಉತ್ತಮ ಕ್ಯಾಚರ್: ವಂಶಿಕ, ಆಳ್ವಾಸ್ ಪಿ.ಯು. ಕಾಲೇಜು, ಮೂಡಬಿದ್ರೆ

ಸೋನಿಯಾ ವರ್ಮ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಪ್ರಮೋದ್ ಕುಮಾರ್, ಉಪಪ್ರಾಂಶುಪಾಲ ರಾಜೇಶ್ ಕೆ. ಉಪನ್ಯಾಸಕಿ ಅಂಕಿತ ಗೌಡ, ಕಬಡ್ಡಿ ತರಬೇತುದಾರ ಕೃಷ್ಣಾನಂದ ರಾವ್, ದೈಹಿಕಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜ ಉಪಸ್ಥಿತರಿದ್ದರು.

ಉಜಿರೆಯಲ್ಲಿ ಅಂತರ್ ಪೊಲಿಟೆಕ್ನಿಕ್ ಪುರುಷರ ಮೇಟ್ ಕಬಡ್ಡಿ ಪಂದ್ಯಾಟ ನಾಳೆ (ಬಾಕ್ಸ್ ಐಟಂ)

ಉಜಿರೆ ಎಸ್.ಡಿ.ಎಂ. ಪೊಲಿಟೆಕ್ನಿಕ್ ಆಶ್ರಯದಲ್ಲಿ ಉಜಿರೆಯಲ್ಲಿ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆ ಮಂಗಳವಾರ ದಕ್ಷಿಣಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಂತರ್ ಪೊಲಿಟೆಕ್ನಿಕ್ ಸಂಸ್ಥೆಗಳ ಪುರುಷರ ಮೇಟ್ ಕಬಡ್ಡಿ ಟೂರ್ನಿ ನಡೆಯಲಿದೆ ಎಂದು ಎಸ್.ಡಿ.ಎಂ. ಪೊಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್ ತಿಳಿಸಿದ್ದಾರೆ.

ಮಂಗಳವಾರ ಪೂರ್ವಾಹ್ನ 9 ಗಂಟೆಗೆ ಪ್ರೊ. ಕಬಡ್ಡಿ ಆಟಗಾರ ಬ್ಯಾಂಕ್ ಆಫ್ ಬರೋಡದ ರತನ್, ಕೆ.ಎ. ಪಂದ್ಯಾಟ ಉದ್ಘಾಟಿಸುವರು.