ವರದಿ ರಾಯಿ ರಾಜಕುಮಾರ
ಕಾರ್ಕಳ: ದೇಶಭಕ್ತಿಯ ಹಾಡನ್ನು ರಚಿಸಿ ಭಾರತಮಾತೆಯನ್ನು ಬಂಧನದಿಂದ ಬಿಡಿಸಲು ಪ್ರಯತ್ನಿಸಿದ ಬಂಕಿಮ ಚಂದ್ರರ ವಂದೇ ಮಾತರಂ ಸದಾ ಸ್ಮರಣೀಯ. ನಮಗೆ ನೆಲೆ, ಬೆಳೆ ನೀಡಿ ಅನುದಿನವೂ ಪೊರೆಯುತ್ತಿರುವ ಭೂಮಿ ತಾಯಿಯನ್ನು ನಾವೆಲ್ಲ ರಕ್ಷಿಸಬೇಕು ಎಂದು ತಮ್ಮ ಆಶೀರ್ವಚನದಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಿಸಿದರು.

ಅವರು ನವೆಂಬರ್ 27ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ರಾಧಾ ಫಾರ್ಮ್ಸ್ ನಲ್ಲಿನ ಪಟೇಲ್ ಮುದ್ದಣ್ಣ ಶೆಟ್ಟಿ ಕ್ಯಾಂಪಸ್ನ ರಾಜೇಶ್ವರಿ ನ್ಯಾಷನಲ್ ಸ್ಕೂಲ್, ಪಿಯು ಕಾಲೇಜಿನ ಕೃಷ್ಣಾನುಗ್ರಹ ಸಾಂಸ್ಕೃತಿಕ ಮಂಟಪದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ಗೈದು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ ಜನರಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದ ಬಂಕಿಮ ಚಂದ್ರದ ಹಾಡಿಗೆ ಎಲ್ಲಾ ಮನಗಳೂ ಎಚ್ಚರಗೊಳ್ಳುತ್ತವೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರು ಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮೂಡುಬಿದಿರೆ ಶ್ರೀಪತಿ ಭಟ್, ಜಯರಾಂ ಶೆಟ್ಟಿ, ವಿದ್ಯಾಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹಾಜರಿದ್ದರು.