ಗಾಳಿ ಮತ್ತು ನೀರಿನ ಮೇಲಿನ ತಿಕ್ಕುವಿಕೆಯಿಂದ ಕಡಲ ಅಲೆಗಳು ಹುಟ್ಟುತ್ತವೆ. ಅಲೆಗಳು ಸಾಮಾನ್ಯವಾಗಿ ಗಾಳಿ ಬೀಸುವುದರಿಂದ ಮೇಲೇಳುತ್ತವೆ. ಚಂಡಮಾರುತಗಳಂತಾ ವಿಪರೀತದ ಗಾಳಿಗಳು ವಿಪತ್ತುಕಾರಕ ಅಲೆಗಳನ್ನು ಎಬ್ಬಿಸುತ್ತವೆ. ನೆಲನಡುಕ, ಭೂಕುಸಿತ, ಬೆಂಕಿಬಾಯಿ ಬಿರಿಯುವಿಕೆಗಳಿಂದಲೂ ಕಡಲಲೆಗಳು ಏಳುತ್ತವೆ.

ಇವು ನೀರಿನಡಿ ಕಲಕಿದಲ್ಲಿ ಭಾರೀ ಅಲೆಗಳು ಏಳುತ್ತವೆ. ಬೆಂಗದಿರ ಮತ್ತು ತಂಗದಿರರ ಗುರುತ್ವಾಕರ್ಷಣೆಯಿಂದಲೂ ಕಡಲಲೆಗಳು ಏಳುತ್ತವೆ. ಕೆರೆ ಸಣ್ಣವು, ಕಡಲು ವಿಶಾಲವಾಗಿರುವುದರಿಂದ ಅಲ್ಲಿ ಅಲೆಗಳು ಸ್ಪಷ್ಟ ಕಾಣುತ್ತವೆ.