ಸಲಿಂಗ ಕಾಮದ ಸಲುವಾಗಿ ದುರುಪಯೋಗ ಮಾಡಿಕೊಂಡ ದೂರು ಬಗೆಗೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ರಾತ್ರಿಯಿಡೀ ಹೊಳೆನರಸೀಪುರ ಸೆನ್ ಠಾಣೆಯಲ್ಲಿ ವಿಚಾರಣೆ ಮಾಡಲಾಯಿತು.

ಸಂತ್ರಸ್ತನು ಸೂರಜ್ ರೇವಣ್ಣ ವಿರುದ್ಧ ಸಲಿಂಗ ದುರುಪಯೋಗದ ದೂರು ನೀಡಿದ್ದನು. ಬ್ಲಾಕ್ ಮೆಯಿಲ್ ಮಾಡುತ್ತಿದ್ದಾನೆ ಎಂದು ಸೂರಜ್ ಸ್ನೇಹಿತ ಸಂತ್ರಸ್ತನ ವಿರುದ್ಧ ದೂರು ನೀಡಿದ್ದನು. ಸಾಕ್ಷ್ಯ ನೀಡಲು ಬರುತ್ತಿದ್ದ ಸೂರಜ್‌ರನ್ನು ಪೋಲೀಸರು ದಾರಿಯಲ್ಲೇ ವಶಕ್ಕೆ ತೆಗೆದುಕೊಂಡರು. ಹಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಸಕಲೇಶಪುರ ಪೋಲೀಸು ಮುಖ್ಯಸ್ಥ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಹಾಸನ ಎಸ್‌ಪಿ ಮೊಹಮ್ಮದ್ ಸುಜಿತಾ ಅವರು ರಾತ್ರಿಯೇ ವಿಚಾರಣೆಯ ಸ್ಥಳಕ್ಕೆ ಬಂದು ಕೆಲವು ಸೂಚನೆಗಳನ್ನು ನೀಡಿ ತೆರಳಿದರು.
ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದ್ದು, ಸೂರಜ್ ರೇವಣ್ಣರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು. ಆ ಸಮಯದಲ್ಲಿ ಬೆಂಬಲಿಗರು ಜೈಕಾರ ಹಾಕಿದರು. ಸೋಮವಾರ ಸೂರಜ್ ಪರ ಜಾಮೀನು ಅರ್ಜಿ ಸಲ್ಲಿಸಲಾಗಿದೆ.
ನನ್ನ ಕುಟುಂಬದ ವಿರುದ್ಧ ಭಾರೀ ಷಡ್ಯಂತ್ರ ನಡೆದಿರುವುದಾಗಿ ಮಾಜೀ ಸಚಿವ ರೇವಣ್ಣ ಆಪಾದನೆ ಮಾಡಿದ್ದಾರೆ.