ಉಜಿರೆ: “ಮದ್ಯವನ್ನು ತ್ಯಜಿಸಬೇಕಾದರೆ ಮಾನಸಿಕವಾಗಿ ಸ್ಥ್ಯೆರ್ಯ, ಶುದ್ಧಮನಸ್ಸು, ಪ್ರಾಮಾಣಿಕತೆ ಹೊಂದಿರಬೇಕು. ವ್ಯಸನಿಯು ಸ್ಥಿರ ಚಿತ್ತದಿಂದ ಕಠಿಣ ಶಪಥವನ್ನು ಮಾಡಿಕೊಂಡು ಸ್ವಪ್ರಯತ್ನದಿಂದ ಮನೆಯವರ ಸಹಕಾರ ಪಡೆದಾಗ ಮುಕ್ತಿ ಹೊಂದಲು ಸಾಧ್ಯ. ಮದ್ಯ ವ್ಯಸನದಲ್ಲಿ ಕೊನೆಯ ಹಂತ ವೇಡ್ರಿಂಕ್ಸ್‍ಟೇಕ್‍ ದ ಡ್ರಿಂಕ್ಸ್ (ಮದ್ಯವು ಮದ್ಯವನ್ನೇ) ಸೇವಿಸುವುದಾಗಿದೆ. ಮದ್ಯಪಾನವನ್ನು ನಾವು ಬಿಟ್ಟರೂ ಮದ್ಯ ನಮ್ಮನ್ನು ಬಿಡುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ವ್ಯಸನದಿಂದ ವಿಮುಕ್ತಿ ಹೊಂದಲು ಸಹಾಯ ಹಸ್ತದ ಅವಶ್ಯಕತೆಇದ್ದು, ಅದನ್ನು ಸರಿಯಾದ ವೈಜ್ಞಾನಿಕ ವ್ಯವಸ್ಥೆಯೊಂದಿಗೆ ನೀಡಿದಾಗ ಪರಿವರ್ತನೆ ಸಾಧ್ಯವೆಂಬುದನ್ನು ಈ ಶಿಬಿರಗಳು ಸಾಬೀತುಪಡಿಸಿವೆ

ವ್ಯಸನಿಗಳನ್ನು ಪರಿವರ್ತನೆಗೊಳಿಸುವುದು ಅದೊಂದು ಮಹಾ ಸಾಧನೆ ಹಾಗೂ ಮಹಾ ಯಜ್ಞವಾಗಿದೆ. ಆದುದರಿಂದ ಕುಡುಕರಾಗಿ ಸೇರಿದ ಎಲ್ಲರೂ ಮದ್ಯಮುಕ್ತ ಸಾಧಕರಾಗಿ ಸಮಾಜದಲ್ಲಿ ಗೌರವವನ್ನು ಸಂಪಾದಿಸಬೇಕು. ಸ್ವತ: ಮನ:ಪೂರ್ವಕವಾಗಿ ಪರಿವರ್ತನೆಯನ್ನು ಹೊಂದಬೇಕು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 226ನೇ ವಿಶೇಷ ಮದ್ಯವರ್ಜನ ಶಿಬಿರದ77 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

“ಮದ್ಯ ಸೇವನೆ ಬಿಡಬೇಕು ಎಂದು ಮನಸಾರೆ ಸಂಕಲ್ಪ ಮಾಡಿದರೆ ಎಂಟೇ ದಿನಗಳಲ್ಲಿ ಮುಕ್ತಿ ಹೊಂದಬಹುದು. ಬೇರೆಯವರ ಒತ್ತಾಯಕ್ಕೆಮಣಿದು 90 ದಿವಸ ಕೂಡಿಟ್ಟ ರೂ ಮದ್ಯಪಾನ ಬಿಡಲು ಸಾಧ್ಯವಿಲ್ಲ. ಒಬ್ಬ ವ್ಯಸನಿ ಶಿಬಿರಕ್ಕೆ ಬಂದು ಕುಡಿತ ಬಿಟ್ಟ ಮೇಲೆ ಅವರ ಕುಟುಂಬದ ಸದಸ್ಯರು ಅವನನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮಯೋಜನೆಯ ಹಲವಾರು ಕಾರ್ಯಕ್ರಮಗಳಲ್ಲಿ ಇದು ಪುಣ್ಯದ ಕೆಲಸವಾಗಿದೆ” ಎಂದು ಅವರು ಮಾರ್ಗದರ್ಶನ ನೀಡಿದರು. ರಾಜ್ಯದಲ್ಲಿ ಈ ಬಾರಿ ವಾರ್ಷಿಕವಾಗಿ173 ಶಿಬಿರಗಳ ಕ್ರಿಯಾಯೋಜನೆಯನ್ನು ಹಾಕಲಾಗಿದ್ದು, ಜೂನ್ ತಿಂಗಳಲ್ಲಿ 17 ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆಎಂದು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿ. ಪಾೈಸ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪೂಜ್ಯರ ಆಪ್ತ ಕಾರ್ಯದರ್ಶಿಯವರಾದ  ವೀರು ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಹರೀಶ್, ಸಂಶೋಧಕಿ ಕೆಎಂಸಿ ಮಣಿಪಾಲದ ಪ್ರಾಚಿ ಮೋಟ, ರುಡ್‍ಸೆಟ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ  ಮಾಧವಗೌಡ, ಶಿಬಿರಾಧಿಕಾರಿಗಳಾದ ದಿನೇಶ್ ಮರಾಠಿ,ಆರೋಗ್ಯ ಸಹಾಯಕಿ ಜಯಲಕ್ಷ್ಮೀ, ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ :08.07.2024ರಂದು ನಡೆಯಲಿದೆಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.