ಮಂಗಳೂರು: ಬಜಾಲ್ ನಂತೂರ್ ಬದ್ರಿಯಾ ಜುಮಾ ಮಸ್ಜಿದ್, ಹಯಾತುಲ್ ಮದ್ರಸ ಇದರ ಮಹಾಸಭೆಯು ಸಭಾಧ್ಯಕ್ಷ ಬಿ.ಅಹ್ಮದ್ ಬಾವ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜುಮಾ ನಮಾಜಿನ ಬಳಿಕ ನಡೆಯಿತು.
ಸಭೆಯಲ್ಲಿ ಜಮಾಅತ್ ಇಮಾಮರಾದ ಪಿ.ಎಸ್.ಮೊಹಮ್ಮದ್ ಖಾಮಿಲ್ ಸಖಾಫಿ ದುವಾ ಗೈದರು. ಅಬ್ದುಲ್ ಹಮೀದ್ ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು. ಬಳಿಕ ಜಮಾಅತಿಗರ ಸರ್ವಾನುಮತದಿಂದ ಮುಂದಿನ ಅವಧಿ ವರೆಗೆ ಬಜಾಲ್ ನಂತೂರ್ ಬದ್ರಿಯಾ ಜುಮಾ ಮಸ್ಜಿದ್ ನೂತನ ಅಧ್ಯಕ್ಷರಾಗಿ ಮ.ನ.ಪಾ ಸದಸ್ಯ ಅಬ್ದುಲ್ ರವೂಫ್ 2ನೇ ಬಾರಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ನೂತನ ಸಮಿತಿಗೆ ಉಪಾಧ್ಯಕ್ಷರಾಗಿ ಮ.ನ.ಪಾ ಸದಸ್ಯ ಕೆ.ಇ.ಅಶ್ರಫ್, ಮೊಹಮ್ಮದ್ ಹನೀಫ್ ಎಚ್.ಎಸ್, ಮೊಹಮ್ಮದ್ ಎಂ.ಎಚ್. ಫೈಸಲ್ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್, ಸಂಚಾಲಕರಾಗಿ ಬಿ.ಕೆ. ಫಕ್ರುದ್ದೀನ್, ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಶಾಂತಿನಗರ, ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಎಸ್.ಎಲ್.ಎಂ, ಉಸ್ತುವಾರಿಯಾಗಿ ನಝೀರ್ ಬಜಾಲ್, ಹಸನಬ್ಬ ಮೋನು ಪುಲ್ಯಾಡಿ, ಯೂಸೂಫ್ ಕುಂಬ್ಲಳಿಕೆ, ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಮೊಹಮ್ಮದ್ ಅಶ್ರಫ್ ತೋಟ, ಮೊಹಮ್ಮದ್ ಹನೀಫ್ ಬೈಕಂಪಾಡಿ, ಅಬ್ಬಾಸ್ ಶಾಂತಿನಗರ, ಮೊಹಮ್ಮದ್ ಹನೀಫ್ ಕೆಳಗಿನಮನೆ, ನಝೀರ್ ಪಾಂಡೇಲ್ ನೇಮಕಗೊಂಡಿದ್ದಾರೆ.
ಈ ಸಂದರ್ಭ ಹಿರಿಯರಾದ ಹಾಜಿ ಬಿ.ಎನ್. ಅಬ್ಬಾಸ್, ಅಬ್ದುಲ್ ಖಾದರ್ ಕೊಡಂಗೆ, ಮೊಯ್ದೀನ್ ಕುಞಿ ಪೊಡಿಯಾಕ, ಎನ್.ಎಸ್.ಆರ್.ನಾಸೀರ್, ಶರೀಫ್ ಪೈಂಟರ್, ಇಬ್ರಾಹೀಂ ಕೊಟ್ರೊಡಿ, ತರ್ ಬೀಅತ್ ಮಸೀದಿ ಅಧ್ಯಕ್ಷ ಉಸೈನ್ ಶಾಂತಿನಗರ, ಗೌಸಿಯಾ ಜುಮಾ ಮಸೀದಿಯ ಸದಸ್ಯರರು, ಜಮಾಅತಿಗರು ಉಪಸ್ಥಿತರಿದ್ದರು. ಮೊಹಮ್ಮದ್ ಇಕ್ಬಾಲ್ ಅಹ್ಸ್ ನಿ ವಂದಿಸಿದರು.