ಹಳೆಯಂಗಡಿ: ಅನುಗ್ರಹ ಯೋಗ ಕೇಂದ್ರ ಕಿನ್ನಿಗೋಳಿ, ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್, ಗ್ರಾಮ ಪಂಚಾಯತ್ ಹಳೆಯಂಗಡಿ, ಪಡುಪಣಂಬೂರು , ಸಸಿಹಿತ್ಲು ಯುವಕ ಯುವತಿ ಮಂಡಲ, ನಮೋದಯ ಮಹಿಳಾ ಮಂಡಲ, ಹಳೆ ವಿದ್ಯಾರ್ಥಿ ಸಂಘ ಸಸಿಹಿತ್ಲು ಮತ್ತು ಮುಂಬೈ ಸಮಿತಿ , ಆಂಜನೇಯ ಗುಡಿ ವ್ಯಾಯಾಮ ಶಾಲೆ ಹಾಗೂ ಹಾವಂಜೆ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನ ಸಹಯೋಗದಲ್ಲಿ ಸಸಿಹಿತ್ಲು ಕಡಲ ಕಿನಾರೆಯಲ್ಲಿ ರಥಸಪ್ತಮಿ ಕಾರ್ಯಕ್ರಮ 28ನೇ ಜನೆವರಿ 2023 ಶನಿವಾರದಂದು ಬೆಳಿಗ್ಗೆ 5:30 ಗಂಟೆಯಿಂದ 7:30 ಗಂಟೆ ತನಕ ಸಸಿಹಿತ್ಲು ಕಡಲ ಕಿನಾರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 108 ಸೂರ್ಯ ನಮಸ್ಕಾರದ ಮೂಲಕ ಸೂರ್ಯ ನಮಸ್ಕಾರ ಯಜ್ಞ ನಡೆಯಿತು. ಕಾಂಚನ ಗಣೇಶ್ ಅವರು ಯೋಗ ಗುರುಗಳಾಗಿ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿಲೀಪ್ ಸಸಿಹಿತ್ಲು ಸ್ವಾಗತಿಸಿ ಗಣೇಶ್ ಕಿನ್ನಿಗೋಳಿ ಅವರು ಧನ್ಯವಾದ ಹೇಳಿದರು ರಾಜಲಕ್ಷ್ಮಿ ಸತೀಶ್ ಕಾರ್ಯಕ್ರಮವನ್ನು ನಿರೂಪಿಸಿದರು