ಮಂಗಳೂರು, ಜ 28: ಇತ್ತೀಚೆಗೆ ಅಗಲಿದ ಸಮಾಜ ಸೇವಕರಾದ ಮರ್‌ಹೂಮ್‌ ನೌಶಾದ್ ಹಾಜಿ ಸುರಲ್ಪಾಡಿಯವರ ಸ್ಮರಣಾರ್ಥ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಚಿಸುವ ಸಲುವಾಗಿ ಸಮಾಲೋಚನ ಸಭೆಯು ದಿನಾಂಕ 27-01-2023ರಂದು ಸಂಜೆ 7:00 ಘಂಟೆಗೆ ನಗರದ ಅಲ್ ಇಹ್ ಸಾನ್ ಮಸೀದಿಯ ಸಭಾಂಗಣದಲ್ಲಿ ಜರುಗಿತು.

ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಸಂಸ್ಥಾಪಕರಾದ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾ ಮಾಡಿ ಉದ್ಘಾಟನೆಗೈದರು. ಟ್ರಸ್ಟ್ ರಚನೆಯ ಉದ್ದೇಶವನ್ನು ಸವಿಸ್ತಾರವಾಗಿ ವಿವರಿಸಿ ನೂತನ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ರಫೀಕ್ ಮಾಸ್ಟರ್ ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಹುಸೈನ್ ದಾರಿಮಿ ರೆಂಜಲಾಡಿ, ಮಾಜಿ ಮೇಯರ್ ಕೆ.ಅಶ್ರಫ್, ಉಸ್ಮಾನ್ ಏರ್ ಇಂಡಿಯಾ, ಇಸಾಕ್‌ ತೋಡಾ‌ರ್ ಮುಂತಾದವರು ಮರ್‌ಹೂಮ್‌ ನೌಶಾದ್ ಹಾಜಿಯವರ ಜೀವನ ಮತ್ತು ಸೇವೆಯ ಬಗ್ಗೆ ಅನುಸ್ಮರಣಾ ಮಾತುಗಳನ್ನಾಡಿದರು. ಆಸೀಫ್ ಆದರ್ಶ್ ಸುರಲ್ಪಾಡಿ ಪ್ರಸ್ತುತ ಯೋಜನೆಗಳ ಬಗ್ಗೆ ವಿವರಿಸಿದರು. 

ಸಮಾಲೋಚನಾ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಸಂಘ ಸಂಸ್ಥೆಗಳ ಮುಖ್ಯಸ್ಥರು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಉದ್ಯಮಿಗಳು ನೌಶಾದ್‌ ಹಾಜಿಯವರ ಅಭಿಮಾನಿಗಳು ಮತ್ತು ಸಹೋದರರಾದ ಜಲೀಲ್ ಮತ್ತು ಅಬ್ದುಲ್‌ ಸತ್ತಾರ್ ಭಾಗವಹಿಸಿದರು.

ಇಕ್ಬಾಲ್ ಬಾಳಿಲ ಸ್ವಾಗತಿಸಿದರು. ಡಾ.ಸಿದ್ದೀಕ್ ಅಡ್ಡೂರು ಧನ್ಯವಾದಗೈದರು. ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.