ದಕ್ಷಿಣ ಕನ್ನಡ ಜಿಲ್ಲೆಯ ಇಂಟಕ್ ಮತ್ತು ಯುವ ಇಂಟಕ್ ಇವರು ಲೇಡಿ ಗೋಶನ್ ಆಸ್ಪತ್ರೆಯ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಜೊತೆ ಸೇರಿ ಮಂಗಳೂರಿನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಇಂಟಕ್ ನಾಯಕ ರಾಕೇಶ್ ಮಲ್ಲಿಯವರ 50ನೇ ಹುಟ್ಟು ಹಬ್ಬವನ್ನು ರಕ್ತ ದಾನ ಶಿಬಿರದ ಸಹಿತ ಆಚರಿಸಿತು.
ರಕ್ತ ದಾನ ಶಿಬಿರ ಮತ್ತು ಕಾರ್ಯಕ್ರಮವನ್ನು ಮಾಜೀ ಮಂತ್ರಿ ವಿನಯಕುಮಾರ್ ಸೊರಕೆಯವರು ಉದ್ಘಾಟನೆ ಮಾಡಿದರು.
ಉದ್ಘಾಟಿಸಿ ಮಾತನಾಡಿದ ಸೊರಕೆಯವರು ಭಾರತದ ಆಧುನಿಕ ಇತಿಹಾಸ ಎಂದರೆ ಅದು ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್‌ನ ಪೂರ್ವ ನಾಯಕರಾದ ಮಹಾತ್ಮಾ ಗಾಂಧಿಯವರು, ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಜನ ಸೇವೆ ಸಲ್ಲಿಸುತ್ತ ಪ್ರಾಣಾರ್ಪಣೆ ಮಾಡಿದರು. ಸ್ವಾತಂತ್ರ್ಯ ದೊರೆತಾಗ 33 ಕೋಟಿ ಇದ್ದ ಜನಸಂಖ್ಯೆ ಇಂದು 130 ಕೋಟಿ ದಾಟಿದೆ. ದೇಶದ 100 ಕೋಟಿ ಜನರನ್ನು ಆರ್ಥಿಕವಾಗಿ ಮತ್ತು ಇತರ ರೀತಿಯಲ್ಲಿ ಸಬಲರಾಗಿಸಿದ ಪಕ್ಷ ಕಾಂಗ್ರೆಸ್, ಅದರಲ್ಲೂ ಇಂದಿರಾ ಗಾಂಧಿಯವರ ಸಾಧನೆ ಅಪಾರ. ಫೋನ್ ಕ್ರಾಂತಿ, ಚಂದ್ರಯಾನ, ಕಂಪ್ಯೂಟರ್ ಕ್ರಾಂತಿ ಇದರ ಹಿಂದಿರುವುದು ರಾಜೀವ್ ಗಾಂಧಿ. ಜಗತ್ತಿಗೆ ಸತ್ಯ, ಶಾಂತಿ, ಅಹಿಂಸೆಯ ಮೂಲಕ ಹೋರಾಟ ಮಾಡಿ ಗೆಲ್ಲಬಹುದು ಎಂದು ಜಗತ್ತಿಗೆ ತೋರಿಸಿದ್ದು ಕಾಂಗ್ರೆಸ್ ಪಕ್ಷ ಎಂದೂ ಸೊರಕೆ ಹೇಳಿದರು.
ಅನಂತರ ರಮಾನಾಥ ರೈ ಅವರು ಮಾತನಾಡಿ ಬ್ರಿಟಿಷರ ಪೋಲೀಸ್ ಕೆಲಸ ಮಾಡಿದವರು ಇಂದು ಕಾಂಗ್ರೆಸ್‌ಗೆ ದೇಶ ಪ್ರೇಮದ ಕತೆ ಹೇಳುತ್ತಾರೆ. ಈಗಿನ ಮೋದಿ ಆಡಳಿತ ಮತ್ತು ಅಂದಿನ ಬ್ರಿಟಿಷ್ ಆಡಳಿತ ಎರಡೂ ಒಂದೇ. ಕಾಂಗ್ರೆಸ್ ಮಾತ್ರ ಎಲ್ಲಾ ಜಾತಿ ಜನಾಂಗದ ಜನರಿಗೆ ಸೇರಿದ ಪಕ್ಷ ಎಂದರು.
ಕಾರ್ಯಕ್ರಮದಲ್ಲಿ ರಾಕೇಶ್ ಮಲ್ಲಿ, ಮಾಜೀ ಶಾಸಕ ಮೊಯ್ದಿನ್ ಬಾವಾ, ಮಾಜೀ ಮೇಯರ್ ಗಳಾದ ಕವಿತಾ ಸನಿಲ್, ಮಹಾಬಲ ಮಾರ್ಲ, ಜಿ. ಪಂ. ಸದಸ್ಯರಾದ ಮಮತಾ ಗಟ್ಟಿ, ಸಿ. ಎ. ರಹೀಂ, ಸಂತೋಷ್ ಲೋಬೋ, ಅಬೂಬಕರ್, ಬಿ. ಕೆ. ಸುರೇಶ್ ಮೊದಲಾದವರು ಇದ್ದರು. ಕಾಂಗ್ರೆಸ್‌ನ 136ನೇ ಸ್ಥಾಪನಾ ದಿನದ ನಿಮಿತ್ತ ಬಡವರಿಗೆ ಅಕ್ಕಿ ವಿತರಿಸಲಾಯಿತು.
ಅನಂತರ ಮತ್ತಿಬ್ಬರು ಕಾಂಗ್ರೆಸ್ ನಿಷ್ಟರನ್ನು ಸನ್ಮಾನಿಸಲಾಯಿತು.