ಮಂಗಳೂರು: ಕಳೆದ ಮೂವತೈದು ವರುಷಗಳಿಂದ ಕನ್ನಡ, ಕೊಂಕಣಿ, ತುಳು,ಇಂಗ್ಲೀಷ್ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ಗಳ ರಚನೆ ಮಾಡುತ್ತಿರುವ ಪತ್ರಕರ್ತ ರೇಮಂಡ್ ಡಿಕುನಾ ತಾಕೊಡೆ ಅವರ ಕನ್ನಡ ಕೃತಿ "ಪತಿಪತ್ನಿ ಸುತಾಲಯ" ಸಂದೇಶ ಸಾಂಸ್ಕೃತಿಕ ಪ್ರತಿಷ್ಠನದ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕುರ ಬಿಡುಗಡೆ ಮಾಡಿ ಲೋಕಾರ್ಪಣೆಗೈದರು.
ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾಕ್ಟರ್ ಬಿಷಪ್ ಪೀಟರ್ ಪಾವ್ಲ್ ಸಲ್ದಾನಾ ಮುನ್ನುಡಿ ಬರೆದ ಈ ಪುಸ್ತಕ ಸುಖ ಸಂಸಾರದ ಹಲವು ಮಜಲುಗಳು ತೆರೆದು ತಿಳಿಸುವುದು ಆದರೆ ಇತ್ತೀಚಿನ ದಿನಗಳ ಶ್ರೇಷ್ಠ ಕೃತಿ ಇದಾಗಿದೆ ಎಂದು ಹೇಳಿದ ಕಲ್ಕೂರ ಅವರು ಇಂತಹ ಕೃತಿ ಹೆಚ್ಚು ಭಾಷೆಗಳಲ್ಲಿ ತರ್ಜುಮೆ ಆಗುವುದು ಇಂದಿನ ಸಾಮಾಜಿಕ ಸ್ಥಿತಿಯ ಅಗತ್ಯವಾದ ಕೆಲಸ ಎಂದರು.
ಕಥಾಬಿಂದು ಪ್ರಕಟನೆ ಮಾಡಿದ ಈ ಕೃತಿ ಎಲ್ಲಾರೂ ಕೊಂಡು ಓದುವ ಮೂಲಕ ಕೊಂಡಾಡಬೇಕು.ಉಚಿತವಾಗಿ ಯಾರಿಗೂ ಕೊಡಬಾರದು.ಕೊಂಡು ಓದುವ ಪರಿಪಾಠವು ರೂಡಿಸಬೇಕು ಎಂದು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ನುಡಿದರು.
ಕಾರ್ಯಕ್ರಮ ದಲ್ಲಿ ಸಂದೇಶ ಪ್ರತಿಷ್ಠಾನದ ಪಾ.ಪ್ರಾನ್ಸಿಸ್ ಅಸ್ಸಿಸಿ ಅಲ್ಮೇಡ,ಮೂಡಬಿದಿರೆಯ ಶ್ರೀಪತಿ ಭಟ್,ಸಿನಿಮಾ ಕಥೆ ಲೇಖಕಿ ರಜನಿ ಗೋಕಾಕ,ಪ್ರಕಾಶಕರಾದ ಪ್ರದೀಪ್ ಕುಮಾರ್ ಕಥಾಬಿಂದು ವೈದ್ಯ ಸುರೇಶ ನೆಗಳಗುಳಿ, ಹಿರಿಯ ಬರಹಗಾರ ಹರಿಶ್ಚಂದ್ರ ಮೂಲ್ಕಿ,ಮುಂತಾದ ಗಣ್ಯರಿದ್ದರು.
ಪ್ರದೀಪ್ ಕುಮಾರ್ ಸ್ವಾಗತಿಸಿದರು. ರೇಮಂಡ್ ಡಿಕುನಾ ಪುಸ್ತಕ ದ ಬಗ್ಗೆ ಮಾಹಿತಿ ನೀಡಿದರು. ಕಾಸರಗೋಡು ಅಶೋಕ್ ಕುಮಾರ್ ವಂದಿಸಿದರು.ಸುಧಾ ನಾಗೇಶ್ ನಿರೂಪಿಸಿದರು.