ಬೆಳಗಾವಿ ಬಳಿಯ ಎಸ್. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಗೆ ಹೊಂದಿದಂತೆ ಬಿಎಸ್‌ಸಿ ಮದ್ಯಸಾರ ತಂತ್ರಜ್ಞಾನ ಕೋರ್ಸಿಗೆ ಮಂತ್ರಿ ಶಂಕರ ಬಿ. ಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು. ರಾಜ್ಯದಲ್ಲಿ ಈ ಪದವಿಗವಕಾಶ ಇದೇ ಮೊದಲು.
Image courtesy
ಈಗ ಎಲ್ಲ ಕಡೆ ಎತೆನಾಲ್ ಉತ್ಪಾದನೆ ಮತ್ತು ಬಳಕೆ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಲಿರುವುದರಿಂದ ಅದಕ್ಕೆ ಸೂಕ್ತ ತಜ್ಞರನ್ನು ತಯಾರಿಸಿ ಇಡುವುದು ಈ ಅಧ್ಯಯನ ಕೋರ್ಸಿನ ಆರಂಭದ ಉದ್ದೇಶ ಎಂದು ಸಚಿವರು ಹೇಳಿದರು.
ಮೊದಲ ಬ್ಯಾಚಿನಲ್ಲಿ 20 ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸಂಯೋಜನೆಯಲ್ಲಿ ಸದ್ಯ ಈ ಕೋರ್ಸ್ ನಡೆಯುತ್ತದೆ ಎಂದೂ ಅವರು ಹೇಳಿದರು. ಕಬ್ಬು ಅಭಿವೃದ್ಧಿ ಮಂಡಳಿ ಆಯುಕ್ತ ಶಿವಾನಂದ ಕಲಕೇರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.