ಮಂಗಳೂರು: ಧ್ವಜಾರೋಹಣಾ ನೆರವೇರಿಸಿ ಬಳಿಕ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ, ನಮ್ಮ ಮಹಾನ್ ನಾಯಕರು ಮಾತೃಭೂಮಿಯ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಹಾಗೂ ದೇಶವನ್ನು ಪರಕೀಯರ ದಬ್ಬಾಳಿಕೆಯಿಂದ ಭಾರತೀಯರಿಗೆ ಸ್ವಾತಂತ್ರ್ಯಗಳಿಸಿಕೊಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ರಚಿಸಿದರು. ಬ್ರಿಟಿಷರಿಂದ ದೇಶವನ್ನು ಮುಕ್ತ ಮಾಡಲು ಅನೇಕ ಕಾಂಗ್ರೆಸ್ ನಾಯಕರು ತಮ್ಮ ಜೀವವೇ ಬದಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಸುದೀರ್ಘವಾಗಿ ದೇಶದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆಯನ್ನು ನೀಡಿದೆ. ಸ್ವಾತಂತ್ರ್ಯ ನಂತರ ಬಡವರು, ಶೋಷಿತರು, ಅವಕಾಶ ವಂಚಿತ ಜನರ ದನಿಯಾಗಿ, ಪ್ರಜಾಪ್ರಭುತ್ವದ ಕಾವಲುಗಾರನಾಗಿ,  ದೇಶದ ಏಕತೆ ಮತ್ತು ಸಮಗ್ರತೆಯ ಪ್ರತಿಪಾದಕನಾಗಿ ಕಾಂಗ್ರೆಸ್ ನಿರಂತರ ಚಳವಳಿ ನಡೆಸುತ್ತಾ ಬಂದಿದೆ. ಕಾಂಗ್ರೆಸ್ ಆದರ್ಶಗಳನ್ನು ಉಳಿಸಿಕೊಂಡು ಇನ್ನಷ್ಟು ಬಲಗೊಳಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವ, ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ,  ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಶಾಲೆಟ್ ಪಿಂಟೊ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಲಾರೆನ್ಸ್ ಡಿಸೋಜಾ, ಅಬ್ಬಾಸ್ ಅಲಿ, ಅಬ್ದುಲ್ ರವೂಫ್, ಬಿ.ವಿಶ್ವನಾಥ್, ನೀರಜ್ ಚಂದ್ರ ಪಾಲ್, ಶಬ್ಬೀರ್ ಎಸ್, ನಝೀರ್ ಬಜಾಲ್, ಟಿ.ಕೆ.ಸುಧೀರ್, ಲಿಯಾಕತ್ ಶಾ, ಯೋಗಿಶ್ ನಾಯಕ್, ಸಂಶುದ್ದೀನ್ ಬಂದರ್, ಟಿ.ಹೊನ್ನಯ್ಯ, ಲಕ್ಷ್ಮೀ ನಾಯರ್, ಇಮ್ರಾನ್ ಎ.ಆರ್, ರಮಾನಂದಪೂಜಾರಿ, ಎಸ್.ಕೆ ಸೌಹಾನ್, ಶಶಿಕಲಾ ಪದ್ಮನಾಭ, ಧರ್ಮ, ಭೀಮ ಶಂಕರ್, ಜೋಸೆಫ್, ಝುಬೈರ್, ಜೋಸೆಫ್, ಗೀತಾ ಅತ್ತಾವರ, ಆಶೀಫ್ ಬೆಂಗ್ರೆ, ಹಾರ್ಬಟ್, ಫಯಾಝ್ ಅಮ್ಮೆಮ್ಮಾರ್,ಮಲ್ಲಿಕಾರ್ಜುನಾ ಕೋಡಿಕಲ್, ರಿಯಾಝ್ ತಲಕಂಬು,  ಮಿಥುನ್ ಕುಮಾರ್, ಲಕ್ಷ್ಮಣ್ ಶೆಟ್ಟಿ, ರೋಬಿನ್ ಉಪಸ್ಥಿತರಿದ್ದರು.

ಧ್ವಜರಕ್ಷಕರಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜಾ ನಿರ್ವಹಿಸಿದರು.