ಅಮೆರಿಕ ಸಂಯುಕ್ತ ಸಂಸ್ಥಾನದ ಯೂಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೊಪ್ರಾರು 88.13 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗಳಿಸಿದರು. ಇದು ಭಾರತದ ಪುರುಷ ಒಬ್ಬರು ವಿಶ್ವ ಅತ್ಲೆಟಿಕ್ಸ್‌ನಲ್ಲಿ ಗೆಲ್ಲುತ್ತಿರುವ ಮೊದಲ ಪದಕವಾಗಿದೆ. ಒಂದು ರೀತಿಯಲ್ಲಿ ಮೊದಲ ಬೆಳ್ಳಿ ಎಂದು ಕೂಡ ಹೇಳಬಹುದು. ವಿಶ್ವ ಅತ್ಲೆಟಿಕ್ಸ್‌ನ ಟ್ರ್ಯಾಕ್ ಅಂಡ್ ಫೀಲ್ಡ್‌ನಲ್ಲಿ ಭಾರತದ ಎರಡನೆಯ ಪದಕವಿದು. 2007ರಲ್ಲಿ ಅಂಜು ಬಾಬ್ಬಿ ಜಾರ್ಜ್ ಅವರು ಲಾಂಗ್ ಜಂಪ್‌ನಲ್ಲಿ 6.70 ಮೀಟರ್ ದೂರ ಹಾರಿ ಕಂಚು ಗೆದ್ದಿದ್ದರು. ಬೆಳ್ಳಿ ವಿಜೇತೆ ಡ್ರಗ್ಸ್ ತೆಗೆದುಕೊಂಡುದು ಪರೀಕ್ಷೆಯಲ್ಲಿ ತಿಳಿಯಲು ಅಂಜು ಗೆದ್ದ ಕಂಚು ಬೆಳ್ಳಿಗೆ ಏರಿತ್ತು.
