ಮಂಗಳೂರು:  ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್  ಇದರ ವತಿಯಿಂದ ಒಂದು ದಿನದ ದಂತ ವೈದ್ಯಕೀಯ ಕಾರ್ಯಾಗಾರವನ್ನು ಮಂಗಳೂರಿನ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ದಿನಾಂಕ 28 ಜನವರಿ  ಶನಿವಾರದಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ  ಅಧ್ಯಕ್ಷರಾದ  ಮಣಿಪಾಲ ಕಾಲೇಜು ಓಫ್ ಡೆಂಟಲ್ ಸೈನ್ಸಸ್ ನ ಉಪಪ್ರಾಂಶುಪಾಲರಾದ ಡಾ . ಜುನೈದ್ ಅಹ್ಮದ್ ರವರು  ಉದ್ಘಾಟಿಸಿದರು. 

ಈ ಕಾರ್ಯಕ್ರಮವನ್ನು ಮುಂಬೈಯ ಖ್ಯಾತ ದಂತ ವೈದ್ಯರಾದ ಡಾ  ಸಂತೋಷ್ ರವೀಂದ್ರನ್ ರವರು ನಡೆಸಿ ಕೊಟ್ಟರು.  ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ನ  ಕಾರ್ಯದರ್ಶಿ ಏ ಜೆ ಡೆಂಟಲ್ ಕಾಲೇಜ್ ನ ಡಾ. ಭರತ್ ಪ್ರಭು ಹಾಗು ಖಜಾಂಚಿ  ನಗರದ ದಂತ ವೈದ್ಯರಾದ ಡಾ. ಪ್ರಸನ್ನ ಕುಮಾರ್ ರಾವ್ ಹಾಗು ಸಿ ಡಿ ಈ ಮುಖ್ಯಸ್ಥೆ  ನಂದಿತಾ ಸುಜೀರ್ ರವರು ಉಪಸ್ಥಿತರಿದ್ಧರು.