ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದ್ರಿ ತಾಲೂಕಿನಲ್ಲಿ ವಿದ್ಯುತ್ ಸರಬರಾಜನ್ನು  ಮೆಸ್ಕಾಂ ಮೂಡಬಿದಿರೆ ಉಪ ವಿಭಾಗದ ವ್ಯಾಪ್ತಿಯಲ್ಲಿ , ಮೂಡಬಿದಿರೆ ,ಕಲ್ಲಮುಂಡ್ಕುರು ,ಹಾಗೂ ಬೆಳುವಾಯಿ ಶಾಖೆಗಳ ಮೂಲಕ ನಿರ್ವಹಿಸಲಾಗುತ್ತಿದ್ದು , ಮತ್ತು ಮೂಡಬಿದ್ರಿ ಮೆಸ್ಕಾಂ ಉಪವಿಭಾಗದಲ್ಲಿ ಹಲವಾರು ಹುದ್ದೆಗಳು  ಖಾಲಿಯಿದ್ದು  ,ಜನಸಾಮಾನ್ಯರ ಹಿತದ್ರಷ್ಟಿಯಿಂದ ಮೆಸ್ಕಾಂ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸಿ , ಖಾಲಿ ಇರುವ ಮೇಲ್ವಿಚಾರಕರ ,ಜೂನಿಯರ್ ಇಂಜಿನಿಯರ್ ಹಾಗೂ ಪವರ್ ಮ್ಯಾನ್ ಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕೋರಿಕೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು ,ಮನವಿಗೆ ಸ್ಪಂದಿಸಿದ ಮಿಥುನ್ ರೈ ಆವರು ಮೆಸ್ಕಾಂ ಉನ್ನತ ಅಧಿಕಾರಿಳನ್ನು  ತಕ್ಷಣ ಸಂಪರ್ಕಿಸಿ ಸಮಸ್ಸೆಯನ್ನು ಬಗೆಹರಿಸಲು ಸೂಚಿಸಿದರು.

ಈ ಸಂದರ್ಭದ ನಿಯೋಗದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷರು ಹಿರಿಯ ವಿದ್ಯುತ್ ಗುತ್ತಿಗೆದಾರ ಸುಖ್ ರಾಜ್ ಇಂದ್ರ , ಮೂಡುಬಿದ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರವೀಣ್ ಜೈನ್ ,ಮೂಡುಬಿದ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ , ಕ್ರೈಸ್ತ ಮುಖಂಡ ರೋನಾಲ್ಡ್ ಸೇರವೊ , ಜಮಿಯ್ಯತುಲ್ ಫಲಾ ಮೂಡುಬಿದ್ರಿ ತಾಲೂಕು ಕಾರ್ಯದರ್ಶಿ ಅಶ್ರಫ್ ,ಯುವ ಕಾಂಗ್ರೆಸ್ ಅಧ್ಯಕ್ಷ ಅನಿಶ್ ಡಿಸೋಜಾ ಹಾಜರಿದ್ದರು.