ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ 'ಇನ್ನೋವೇಶನ್ 2025_II - ಕೋಡ್ 4 ಭಾರತ್: ನ್ಯೂ ಇಂಡಿಯಾ, ಎಂಪವರ್ಡ್ ಇಂಡಿಯಾದ ಕರ್ಟನ್ ರೈಸರ್' ಕಾರ್ಯಕ್ರಮವು ಆಗಸ್ಟ್ 14, 2025 ರಂದು ಹಮ್ಮಿಕೊಳ್ಳಲಾಗಿದೆ. ಈ ಪ್ರಮುಖ ಉಪಕ್ರಮವನ್ನು ಜಾಗತಿಕ ತಂತ್ರಜ್ಞಾನ ನಾಯಕರಾದ ಕಿಂಡ್ರೆಲ್ ಮತ್ತು ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಹಿರಿಯ ಶಿಕ್ಷಣ ತಜ್ಞರು, ಉದ್ಯಮದ ಮುಖಂಡರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದು ಮುಂಬರುವ ಮೆಗಾ ಹ್ಯಾಕಥಾನ್ ನ ದೃಷ್ಟಿ, ಪ್ರಮುಖ ವಿಷಯಗಳು ಮತ್ತು ಕಾರ್ಯತಂತ್ರದ ಮಾರ್ಗಸೂಚಿಯನ್ನು ಅನಾವರಣಗೊಳಿಸಲಿದೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಕಿಂಡ್ರೆಲ್ ಮತ್ತು ಮೈಕ್ರೋಸಾಫ್ಟ್ನ ನಾಯಕತ್ವ ತಂಡಗಳಿಂದ ಮುಖ್ಯ ಭಾಷಣಗಳು, ಉತ್ತಮ ಮಾಹಿತಿಯನ್ನೊಳಗೊಂಡ ಪ್ಯಾನಲ್ ಚರ್ಚೆಗಳು ಮತ್ತು ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಸೆಲ್ಫ್ ಪೇಸ್ಡ್ ಕಲಿಕೆಯ ಯೋಜನೆಯನ್ನು ಪರಿಚಯಿಸುವುದು ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಕ್ರಮವು 24 ಗಂಟೆಗಳ ಪ್ರಾದೇಶಿಕ ಹ್ಯಾಕಥಾನ್ ಆಗಿದ್ದು ಮಂಗಳೂರು ಮತ್ತು ಉಡುಪಿಯ ಎಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳ (ಬಿಇ / ಬಿಟೆಕ್, M.Tech, B.Sc, ಬಿಸಿಎ) ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.
ಮುಖ್ಯ ಕಾರ್ಯಕ್ರಮವಾದ ಹ್ಯಾಕಥಾನ್ ನ್ನು ಇದೇ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾಗಿದ್ದು, ಇದು ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸಲು ಮಹತ್ವಾಕಾಂಕ್ಷಿ ನಾವೀನ್ಯಕಾರರಿಗೆ ಸಂವಾದಾತ್ಮಕ ವೇದಿಕೆಯನ್ನು ಒದಗಿಸುತ್ತದೆ. ಈ ಉಪಕ್ರಮವು ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ನ್ನು ಹೆಚ್ಚಿಸಲು ಶೈಕ್ಷಣಿಕ ಮತ್ತು ಉದ್ಯಮವು ಸಹಕರಿಸುವ ದೃಢವಾದ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇನ್ಕ್ಯುಬೇಶನ್ ಅಭಿವೃದ್ಧಿ, ಶೈಕ್ಷಣಿಕ ಯೋಜನಾ ಬೆಂಬಲ ಮತ್ತು ಕಾಲೇಜು ಕೋಡಿಂಗ್ ಕ್ಲಬ್ಗಳನ್ನು ಬಲಪಡಿಸುವ ಫಲಿತಾಂಶಗಳನ್ನು ಈ ಕಾರ್ಯಕ್ರಮದಿಂದ ನಿರೀಕ್ಷಿಸಲಾಗುತ್ತಿದ್ದು ಅದರೊಂದಿಗೆ ಉದ್ಯಮಶೀಲತೆಯ ಆಲೋಚನೆಗಳನ್ನು ಪೋಷಿಸುತ್ತದೆ. ಈ ಕರ್ಟನ್ ರೈಸರ್ ಕಾರ್ಯಕ್ರಮವು ಹ್ಯಾಕಥಾನ್ ಗೆ ಮುನ್ನುಡಿ ಎಂಬುದಕ್ಕಿಂತ ಹೆಚ್ಚಾಗಿ ಶೈಕ್ಷಣಿಕ-ಉದ್ಯಮ ಸಹಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆ-ಚಾಲಿತ ಕಲಿಕೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ