ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಹೊಸ ಬೆಳಕು ಸಮಾಜ ಸೇವಾ ಬಳಗ ಪಾಲಡ್ಕ, ಕಡಂದಲೆ, ಕಲ್ಲಮುಂಡ್ಕೂರು, ಕಾಂತಾವರ ವಲಯದ ಪ್ರಥಮ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಮಹಿಳಾ ಘಟಕ ಕಡಂದಲೆ -ಪಾಲಡ್ಕ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಜಂಟಿ ಆಶ್ರಯದಲ್ಲಿ ಸೇವಾ ಸಂಘದ ಸಭಾ ಮಂದಿರದಲ್ಲಿ ಅಗಸ್ಟ್ ಹತ್ತರಂದು ಪ್ರಥಮ ವಾರ್ಷಿಕೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ಮೋಹನ್ ದಾಸ್ ಅಡ್ಯಂತಾಯ ವಹಿಸಿದ್ದರು. ಕೇಮಾರು ಈಶ ವಿಠಲ ದಾಸ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಮೊಬೈಲ್ ಗೀಳು ತ್ಯಜಿಸಿ ಬಡವರ ಕಣ್ಣೀರು ಒರೆಸಲು ಪ್ರಯತ್ನಿಸುತ್ತಿರುವ ಎಲ್ಲರನ್ನೂ ಅಭಿನಂದಿಸಿದರು. ವೇದಿಕೆಯಲ್ಲಿ ಸನ್ಮಾನಿಸಲ್ಪಟ್ಟ ಹಾಜಬ್ಬ, ರವಿ ಕಟ್ಪಾಡಿ, ರೋಶನ್ ರೊಂದಿಗೆ ಸುಲೇಮಾನ್, ಸುಚರಿತ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರತಿಭೆಗಳನ್ನು, ನಾಟಿ ವೈದ್ಯರುಗಳು, ಅಂತ್ಯಕ್ರಿಯೆಯಲ್ಲಿ ಸಹಕರಿಸುವ ಕಾರ್ಯಕರ್ತರುಗಳನ್ನೂ ಗೌರವಿಸಲಾಯಿತು. ಕೆಎಂಸಿ, ಮಾಹೆ, ಮಣಿಪಾಲ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು ಇದರ ಸಹಯೋಗದಲ್ಲಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು..