ಮಂಗಳೂರು: ಕಂಕನಾಡಿಯಲ್ಲಿರುವ ಜಂಕ್ಷನ್ ನಿಲ್ದಾಣದಿಂದ ಗುಜರಾತಿನ ಉದ್ನಾಕ್ಕೆ ಕ್ರಿಸ್ಮಸ್ ವಿಶೇಷ ರೈಲು ಓಡಾಡಲಿದೆ. ಮಂಗಳೂರು ಜಂಕ್ಷನ್‌ನಿಂದ ಉದ್ನಾಕ್ಕೆ 09058 ಸಂಖ್ಯೆಯ ರೈಲು ಡಿಸೆಂಬರ್ 22, 26, 29 ಮತ್ತು ಜನವರಿ 2ನೇ ದಿನಾಂಕಗಳಂದು ಬೆಳಿಗ್ಗೆ ಹೊರಟು ರಾತ್ರಿ ಉದ್ನಾ ತಲುಪುವುದು.
ಅದೇ ರೀತಿ 09057 ಸಂಖ್ಯೆಯ ರೈಲು ಉದ್ನಾದಿಂದ ರಾತ್ರಿ ಬೇಗ ಹೊರಟು ಬೆಳಿಗ್ಗೆ ಹೊತ್ತಿಗೆ ಮಂಗಳೂರು ಮುಟ್ಟಲಿರುವುದು.