ಫೆಬ್ರವರಿ 3ರ ಶುಕ್ರವಾರ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧದ ವಿರುದ್ಧ ಬಂದ ಹಲವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು ಕೇಂದ್ರದ ಮೋದಿ ಸರಕಾರಕ್ಕೆ ನೋಟೀಸು ಜಾರಿ ಮಾಡಿತು.

ಹಿರಿಯ ಪತ್ರಕರ್ತ ಎನ್. ರಾಮ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ವಕೀಲರಾದ ಪ್ರಶಾಂತ ಭೂಷಣ್, ಹಿರಿಯ ವಕೀಲ ಎಂ. ಎಲ್. ಶರ್ಮಾ ಮೊದಲಾದವರು ಪಿಐಎಲ್ ಸಲ್ಲಿಸಿದ್ದರು.

2002ರ ಗುಜರಾತ್ ಗಲಭೆಯಲ್ಲಿ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರ ಪಾತ್ರದ ಬಗೆಗೆ ಬಿಬಿಸಿ 'ಇಂಡಿಯಾ: ದ ಮೋದಿ ಕ್ವಶ್ಚನ್' ಸಾಕ್ಷ್ಯಚಿತ್ರ ತಯಾರಿಸಿತ್ತು. ಅದರ ಪ್ರದರ್ಶನ ನಿಷೇಧಿಸಿರುವ ಮೋದಿ ಸರಕಾರವು ಅದನ್ನು ಯೂಟ್ಯೂಬ್, ಟ್ವಿಟರ್ ಮೊದಲಾದವುಗಳಿಂದಲೂ ಎತ್ತಂಗಡಿ ಮಾಡಿತ್ತು.

ಇದು ಸಂವಿಧಾನ ಬಾಹಿರ, ಜನರ ಸ್ವಾತಂತ್ರ್ಯಕ್ಕೆ ದಕ್ಕೆ ಎಂದು ಪಿಐಎಲ್‌ಗಳು ಸಲ್ಲಿಕೆಯಾಗಿವೆ.