ವಿವಿಧ ಭಾಷೆ, ವಿವಿಧ ಸಂಸ್ಕೃತಿಯನ್ನು ಹೊಂದಿರುವ ವೈವಿಧ್ಯಮಯ ದೇಶವೇ ನಮ್ಮ ಭಾರತ ದೇಶ. ಇಂತಹ ಶ್ರೇಷ್ಠ ದೇಶದಲ್ಲಿ ಹುಟ್ಟಿರುವ ನಾವು ಕೃತಾರ್ಥರು. ಪ್ರಪಂಚದ ದೇವಭಾಷೆ ಸಂಸ್ಕೃತದಿoದ ಹೊರಹೊಮ್ಮಿದ ನೂರಾರು ಭಾಷೆಗಳು ಪ್ರಚಲಿತದಲ್ಲಿರುವ ದೇಶ ಭಾರತ. ಅಂತಹ ಪ್ರಚಲಿತ ಭಾಷೆಗಳಲ್ಲಿ ಅತಿಹೆಚ್ಚು ಜನರು ಮಾತನಾಡುವ, ತಿಳಿಯುವ ದ್ವಿತೀಯ ಭಾಷೆಯೇ ಹಿಂದಿ. ಹೀಗಾಗಿಯೇ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸಿ ಸುಮಾರು 7 ದಶಕಗಳೇ ಕಳೆದುವು. ಇತರ ಭಾಷೆಗಳ ವಿರೋಧದ ನಡುವೆಯೂ ಹಿಂದಿ ಭಾಷೆ ದೇಶಾದ್ಯಂತ ಜನರ ನಡುವಿನ ಸಂವಹನ, ಸಂಪರ್ಕ ಭಾಷೆಯಾಗಿ ಅಭಿವೃದ್ಧಿಯಾಗುತ್ತಲೇ ಇದೆ. ದೇಶದ ಯಾವುದೇ ಭಾಗದ ಜನ ವಿರೋಧಿಸಿದರೂ, ಆಂಗ್ಲರ, ಆಂಗ್ಲ ಭಾಷೆಯ ಅಪಾರ ಸಾಹಿತ್ಯ, ಪ್ರಭಾವಗಳ ನಡುವೆಯೂ ವಿಶ್ವಾದ್ಯಂತದ ಸುಮಾರು 30 ಶೇಕಡಾ ಜನರು ಉಪಯೋಗಿಸುತ್ತಿರುವ ಭಾಷೆ ಹಿಂದಿ.
ಸಾಕಷ್ಟು ಸಾಹಿತ್ಯ, ಸಂಸ್ಕೃತಿಗಳಿoದ ಸಂಪದ್ಭರಿತ ಭಾಷೆ ಹಿಂದಿಯನ್ನು ಇತ್ತೀಚೆಗೆ 313 ವಸತಿ ಶಾಲೆಗಳಲ್ಲಿಯ ನೇಮಕಾತಿಯ ಸಂದರ್ಭದಲ್ಲಿ ಕೈಬಿಡಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2019 ನ್ನು ಅನುಷ್ಠಾನಗೊಳಿಸುವ ಈ ಹಂತದಲ್ಲಿ ದೇಶೀಯ ಅದರಲ್ಲೂ ಒಂದು ರಾಷ್ಟ್ರಭಾಷೆಯನ್ನು ಪ್ರೌಢಶಾಲೆ ಹಂತದಲ್ಲಿ ವಸತಿ ಶಾಲೆಗಳಲ್ಲಿ ಕಲಿಸಲು ಅವಕಾಶ ನೀಡಲಿಲ್ಲ ಎಂದರೆ ಇಂತಹ ಮರಣ ಶಾಸನಕ್ಕೆ ಕಾರಣರು ಯಾರು? ರಾಜ್ಯದಲ್ಲಿ ಜಾರಿಯಲ್ಲಿರುವ ತ್ರಿಭಾಷಾ ಸೂತ್ರದ ನಿಯಮದಂತೆ ಮಾತೃಭಾಷೆ, ರಾಷ್ಟçಭಾಷೆ ಹಾಗೂ ಅಂರ‍್ರಾಷ್ಟ್ರೀಯ ಭಾಷೆಗೆ ಅವಕಾಶ ದೊರಕಬೇಕು ತಾನೇ? ಅದೇಕೆ ಇಲ್ಲಿ ಜಾರಿಗೆ ಬರಲಿಲ್ಲ? ಅದರಲ್ಲೂ ವಸತಿ ಶಾಲೆಯಲ್ಲಿ? ರಾಷ್ಟçಭಾಷೆಯೇ ಅವರಿಗೆ ಬೇಡವೇ? ಯಾವ ವಿದ್ಯಾರ್ಥಿ ತಾನೇ ಆ ರೀತಿ ಹೇಳಿದನು?
ಗಡಿ ಪ್ರದೇಶದ ಶಾಲೆಗಳನ್ನು ಬಿಟ್ಟು ಉಳಿದಂತೆ ರಾಜ್ಯದಾದ್ಯಂತ ಆಯಾ ರಾಜ್ಯದ ಭಾಷೆಯೇ ಮಾತೃಭಾಷೆಯಾಗಿರುತ್ತದೆ. ರಾಷ್ಟ್ರಭಾಷೆ ಎಂದು ಪರಿಗಣಿಸಲ್ಪಡುವ ಹಿಂದಿ ಎರಡನೇ ಭಾಷೆಯಾಗಿರುತ್ತದೆ. ಅಂರ‍್ರಾಷ್ಟ್ರೀಯ ಭಾಷೆಯ ಮಾನÀ್ಯತೆ ಆಂಗ್ಲ ಭಾಷೆಗೆ ದೊರಕಿರುತ್ತದೆ. ಆದರೆ ಜನರ ಅಂಧಾನುಕರಣೆಯ ಕಾರಣದಿಂದ ಇತ್ತೀಚೆಗೆ ರಾಜ್ಯದ ಮಾತೃಭಾಷೆಯಾದ ಕನ್ನಡದ ಸ್ಥಾನದಲ್ಲಿ ಆಂಗ್ಲ ಭಾಷೆ ಕುಳ್ಳಿರಿಸಲು ಪ್ರಯತ್ನಗಳು ನಡೆಯುತ್ತಿವೆ. ಅದರಿಂದಾಗಿ ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಮಗುವಿಗೆ ಅಪರಿಚಿತವಾದ, ಕನ್ನಡ ಮಾಧ್ಯಮದವರಿಗೆ ಕಬ್ಬಿಣದ ಕಡಲೆಯಾಗಿರುವ ಆಂಗ್ಲ ಭಾಷೆ ಕಲಿಸಲು ಪ್ರಾರಂಭಿಸಲಾಗಿದೆ. ಹಲವಾರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನೂ ಪ್ರಾರಂಭಿಸಲಾಗಿದೆ. ಇಂತಹ ಪ್ರಯತ್ನದಿಂದಾಗಿ ಪ್ರತೀ ಜಿಲ್ಲೆಯಲ್ಲಿಯೂ ಹಲವಾರು ಕನ್ನಡ ಮಾಧ್ಯಮ ತರಗತಿಗಳು ಮುಚ್ಚಲ್ಪಡುತ್ತಿವೆ. ಆದುದರಿಂದ ಕನ್ನಡ ಮಾಧ್ಯಮ ತರಗತಿಗಳು ಮುಚ್ಚಲು ಪರೋಕ್ಷವಾಗಿ ಸರಕಾರ, ಆಡಳಿತ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಕನ್ನಡ ಪ್ರಾಧಿಕಾರ, ಅಭಿವೃದ್ಧಿ ಸಂಘಗಳು ಜನರ ಮನ ಪರಿವರ್ತನೆಗೆ ಕ್ರಮವಹಿಸಬೇಕಾಗಿವೆ. ಅದೇ ರೀತಿ ಕನ್ನಡ ಮಾಧ್ಯಮ ಶಾಲೆಗಳಲ್ಲಿಯ ಗುಣಮಟ್ಟ ಹೆಚ್ಚಿಸಲು, ಶಿಕ್ಷಕರಿಗೆ ಇಲ್ಲಸಲ್ಲದ ಜವಾಬ್ದಾರಿಗಳನ್ನು ಹೊರಿಸುವುದನ್ನು ನಿಲ್ಲಿಸಬೇಕಾಗಿದೆ. ಹಾಗೆಯೇ ಕೇವಲ ದಾಖಲೆಗೆ ಪ್ರಾಧಾನ್ಯತೆ ನೀಡುವ ಬದಲು, ಶಿಕ್ಷಕರಿಗೆ ಪಾಠ ಮಾಡಲು ಸ್ವಾತಂತ್ರö್ಯ ನೀಡಬೇಕಾಗಿದೆ.
ವಿವಿಧ ಇತರ ತೊಂದರೆಗಳ ನಡುವೆಯೇ ಇದೀಗ ರಾಷ್ಟ್ರಭಾಷೆಗೂ, ರಾಷ್ಟ್ರಭಾಷಾ ಶಿಕ್ಷಕರಿಗೂ, ವಸತಿ ಶಾಲೆಯ ನೇಮಕದ ಹೆಸರಿನಲ್ಲಿ ಮರಣ ಶಾಸನ ಜಾರಿಯಾಗಿದೆ. ಹಿಂದೊಮ್ಮೆ ವಿವಿಧ ಹಿಂದಿ ಪ್ರಚಾರ ಸಭೆಗಳಿಂದ ಪದವಿಗೆ ಸಮಾಂತರ ಅರ್ಹತೆ ಪಡೆದ ಶಿಕ್ಷಕರನ್ನು ನೇಮಿಸಿಕೊಳ್ಳ ಬಾರದೆಂದು ನಿರ್ದಿಷ್ಟ ಪಡಿಸಿ ಹಿಂದಿ ಪ್ರಚಾರ ಸಭೆಗಳು ನಡೆಸುವ ಪರೀಕ್ಷೆಗಳಿಗೆ, ಉತ್ತೀರ್ಣರಾದ ಶಿಕ್ಷಕರಿಗೆ ಕಬ್ಬಿಣದ ಬರೆ ಎಳೆದು ಕಾಲೇಜು ಪದವಿ ಪಡೆದವರು ಮಾತ್ರ ಶಿಕ್ಷಕರಾಗಿ ನೇಮಿಸಲ್ಪಡಬೇಕು ಎಂದು ಕಠಿಣ ನಿಯಮ ಜಾರಿಗೆ ತರಲಾಗಿತ್ತು. ಇದು ಪ್ರಚಾರ ಸಭೆಗಳಿಂದ ಸಮಾಂತರ ಶಿಕ್ಷಣ ಪಡೆದವರನ್ನು ನಡು ನೀರಿನಲ್ಲಿ ತ್ರಿಶಂಕುಗೊಳಿಸಿದ ನಿಯಮ. ಇದೀಗ ಅಂತಹದ್ದೇ ಇನ್ನೊಂದು ರೂಪದಲ್ಲಿ ವಸತಿ ಶಾಲೆಯ ನೇಮಕಾತಿಯ ಹೆಸರಲ್ಲಿ ಹಿಂದಿಯ ವಿರುದ್ಧ ಜಾರಿಯಾಗುತ್ತಿದೆ.
ಭಾರತದಂತಹ ಹಿಂದಿ ರಾಷ್ಟ್ರಭಾಷೆಯಾಗಿರುವ ದೇಶದಲ್ಲಿಯೇ ಹಿಂದಿ ಕಲಿಯಲು, ಕಲಿಸಲು ವಸತಿ ಶಾಲೆಗಳಲ್ಲಿ ಅವಕಾಶ ಇಲ್ಲ. ಹಿಂದಿ ಶಿಕ್ಷಕರಿಗೆ ವಸತಿ ಶಾಲೆಗಳಲ್ಲಿ ನೇಮಕಾತಿ ಇಲ್ಲ ಎಂದಾದರೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2019 ರ ಪರಿಣಾಮ ಮೊತ್ತಮೊzಲಾಗಿ ರಾಷ್ಟ್ರಭಾಷೆಯ ಮೇಲೇ ಆಗುತ್ತಿದೆ. ರಾಷ್ಟ್ರಭಾಷೆ ಕಲಿತ, ರಾಷ್ಟ್ರಭಾಷೆ ಬೋಧಿಸುವ ಶಿಕ್ಷಕರು ಈಗಲೇ ಎಚ್ಚರಗೊಳ್ಳದಿದ್ದರೆ ಮುಂದೊoದು ದಿನ ಹಿಂದಿ ಶಿಕ್ಷಕರು ಎಲ್ಲಾ ಅವಕಾಶಗಳನ್ನೂ ಕಳೆದುಕೊಂಡು ನಡು ರಸ್ತೆಯಲ್ಲಿರಬೇಕಾದ ಸಂದರ್ಭ ಒದಗಬಹುದು. ಅದೇ ರೀತಿ ಕೇಂದ್ರೀಯ ವಿದ್ಯಾಲಯ ಹಾಗೂ ಇತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿರುವ ಹಿಂದಿ ಮಾಧ್ಯಮ, ಹಿಂದಿ ಪ್ರಥಮ ಭಾಷೆ, ಇತ್ಯಾದಿ ಅವಕಾಶಗಳೂ ಕಳೆದುಕೊಳ್ಳಬೇಕಾಗಬಹುದೇನೋ. ಆಗ ನಿಜಕ್ಕೂ ರಾಷ್ಟ್ರಭಾಷಾ ಶಿಕ್ಷಕರು ಭಾರತದಲ್ಲೇ, ಕರ್ನಾಟಕದಲ್ಲೇ ಅನಾಥರಾದರೆ ಅತಿಶಯೋಕ್ತಿ ಅಲ್ಲ. ಪ್ರಪಂಚದ ಬೇರೆ ದೇಶಗಳಲ್ಲಿಯ ಕೆಲವು ವಿದ್ಯಾಲಯಗಳಲ್ಲಿ ಹಿಂದಿ ಭಾಷೆ ಕಲಿಸಲ್ಪಡುತ್ತಿದೆ. ಕೆಲವು ಮಧ್ಯ ಪ್ರಾಚ್ಯ ದೇಶಗಳಲ್ಲಿ ಭಾರತೀಯರೇ ಹಿಂದಿ ಶಾಲೆಗಳನ್ನು ತೆರೆದಿರುತ್ತಾರೆ. ಅಂತಹ ಸಂದರ್ಭಗಳನ್ನೂ ಶಿಕ್ಷಕರು ಕಳಕೊಳ್ಳಬೇಕಾಗಬಹುದು. ಆದುದರಿಂದ ಹಿಂದಿಯ ಬಗೆಗೆ ಕಾಳಜಿ ಇರುವ ಎಲ್ಲರೂ ಒಮ್ಮನಸ್ಸಿನಿಂದ ಒಟ್ಟಾಗಿ ಸಾಹಿತ್ಯ-ಸಂಪದ್ಭರಿತವಾದ ರಾಷ್ಟ್ರಭಾಷೆ, ರಾಷ್ಟ್ರಭಾಷಾ ಶಿಕ್ಷಕರ ಅಭಿವೃದ್ಧಿಗೆ ಪಣತೊಡಿ. ಪ್ರಪಂಚದ ಹಾಗೂ ದೇಶದ ಶ್ರೀಮಂತ ಸಂಪರ್ಕ ಭಾಷೆ ಹಿಂದಿಗೆ ಜೀವ ತುಂಬಿರಿ. ಸಂವಿಧಾನದಲ್ಲಿ ಹೆಸರಿಸಿದಂತೆ ತಾತ್ಕಾಲಿಕ ಸಂಪರ್ಕ ಭಾಷೆ ಆಂಗ್ಲಕ್ಕೆ ಬದಲಾಗಿ ಹಿಂದಿಗೆ ರಾಜ ಭಾಷಾ ಸ್ಥಾನ ಮಾನ ದೊರಕಲಿ.
ಜೈ ಹಿಂದ್ ಜೈ ಹಿಂದಿ.
ಲೇಖನ: ರಾಯೀ ರಾಜಕುಮಾರ್,ಮೂಡುಬಿದಿರೆ
(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,)