ಮಂಗಳೂರಿನಲ್ಲಿ ಮಾದಕ ದ್ರವ್ಯ ಎಂಡಿಎಂಎ ಮಾತ್ರೆಗಳ ಮಾರಾಟ ಮತ್ತು ಪೂರೈಕೆಯಲ್ಲಿ ಕುಖ್ಯಾತನಾಗಿದ್ದ 42ರ ಅಬ್ದುಲ್ ಅಜೀಜ್‌ನನ್ನು ಸಿಸಿಬಿ ಪೋಲೀಸರು ಬಂಧಿಸಿದರು.
ಈತನ ಮೇಲೆ 7 ಪ್ರಕರಣಗಳು ಬೇರ್ಬೇರೆ ಪೋಲೀಸು ಠಾಣೆಗಳಲ್ಲಿ ದಾಖಲಾಗಿದ್ದವು. ತೌಡುಗೋಳಿ ನರಿಂಗಾನದ ಈತನು ದೇರಳಕಟ್ಟೆ ಪ್ರದೇಶವನ್ನು ಮುಖ್ಯವಾಗಿ ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ. ಆರೋಪಿಯಿಂದ 1,30,000 ಮೌಲ್ಯದ ಮಾದಕ ವಸ್ತು ಸಹಿತ ಕಾರು, ಮೊಬಾಯಿಲ್ ಎಂದು 6,41,500 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.