ಹೆಣ್ಣು ಅಮೂಲ್ಯ, ಗಂಡನ ಮನೆಯವರು ತಪ್ಪಾಗಿ ನಡೆದುಕೊಂಡರೆ, ಗೌರವಿಸದೆ ತೊಂದರೆ ಕೊಟ್ಟರೆ ಮಗಳನ್ನು ಗೌರವ ಮತ್ತು ಘನತೆಯಿಂದ ಮನೆಗೆ ಕರೆದುಕೊಂಡು ಬನ್ನಿ ಎಂದು ತಂದೆಯೊಬ್ಬರು ವೀಡಿಯೋ ಸಹಿತ ಮಾಡಿದ ಪೋಸ್ಟ್ ವೈರಲ್ ಆಗಿದೆ.
ಜಾರ್ಖಂಡ್‌ನ ರಾಂಚಿಯ ಕೈಲಾಸ ನಗರದ ಕುಮ್ಹರಕೋಲಿಯ ಪ್ರೇಮ್ ಗುಪ್ತ ಈ ವಿಶೇಷ ಪೋಸ್ಟ್ ಜಾಲ ತಾಣಕ್ಕೆ ಹಾಕಿದವರು. ಇವರ ಮಗಳು ತೊಂದರೆ ಕೊಡುವ ಗಂಡನಿಗೆ ವಿಚ್ಛೇದನ ನೀಡಿದರು. ಹಾಗೆ ವಾಪಾಸಾದ ಮಗಳನ್ನು ಬ್ಯಾಂಡು ವಾದ್ಯಗಳ ಸಹಿತ ಪಟಾಕಿ ಸಿಡಿಸಿ ತಂದೆ ತಾಯಿ ತಮ್ಮ ಕುಟುಂಬ ಮಿತ್ರರೊಂದಿಗೆ ಸ್ವಾಗತಿಸಿದ್ದಾರೆ. ಹಬ್ಬದ ಊಟದ ವ್ಯವಸ್ಥೆಯೂ ಇತ್ತು. ಇದು ಜಡ್ಡು ಹಿಡಿದ ಸಮಾಜ ವ್ಯವಸ್ಥೆಗೆ ಒಂದು ಮದ್ದು ಎಂದು ಪರಿಗಣಿಸಲಾಗಿದೆ.