ಪುಣೆ ಮೂಲದ 40ರ ಪ್ರಾಯದ ತಾಯಿ ಡಾ. ಶಾರ್ವರಿ ಇನಾಮ್ದಾರ್ ಅವರು ಮಂಗೋಲಿಯಾದಲ್ಲಿ ನಡೆದ ವಾರ್ಷಿಕ ಮಾಸ್ಟರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ ಗೆದ್ದರು. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿಕೊಂಡರು.

37 ದೇಶಗಳ ಸ್ಪರ್ಧಿಗಳನ್ನು ಎದುರಿಸಿ ಶಾರ್ವರಿ ಅವರು ಈ ಸಾಧನೆ ಮಾಡಿದರು. 57 ಕಿಲೋ ವಿಭಾಗದಲ್ಲಿ ಸ್ಪರ್ಧಿಸಿದ ಅವರು ಸ್ಕಾಟ್, ಬೆಂಚೊತ್ತು, ಡೆಡ್ ಲಿಫ್ಟ್ ಎಂದು ಒಟ್ಟು 350 ಕಿಲೋ ಎತ್ತಿ ಸ್ವರ್ಣ ಗಳಿಸಿದರು. ಅಲ್ಲದೆ ಮುಕ್ತ ವಲಯದಲ್ಲಿ ಸ್ಪರ್ಧಿಸಿ ಒಟ್ಟು 395 ಕಿಲೋ ಎತ್ತಿ ಮತ್ತೊಂದು ಬಂಗಾರ ಜಯಿಸಿದರು.

ಭಾರತದ ಇನ್ನೊಬ್ಬ ನಾರಿ ರೀನಿ ತಾರಕರಾಂ ಅವರು 69 ಕಿಲೋ ವಿಭಾಗದಲ್ಲಿ ಪೈಪೋಟಿ ನಡೆಸಿ ಚಿನ್ನ ಗೆದ್ದರು.