ಅಮೆರಿಕ ಸಂಯುಕ್ತ ಸಂಸ್ಥಾನದ ಮೈನ್ ರಾಜ್ಯದ ಎರಡನೆಯ ಅತಿ ದೊಡ್ಡ ನಗರ ಲೆವಿಸ್ಟನ್‌ನಲ್ಲಿ ರೆಸ್ಟೋರೆಂಟ್ ಒಂದರಲ್ಲಿ ನಡೆದ ಗುಂಡು ದಾಳಿಯಲ್ಲಿ 16 ಜನರು ಸಾವಿಗೀಡಾಗಿದ್ದು, ಕನಿಷ್ಟ 50 ಜನರು ಗಾಯಗೊಂಡಿರು ಎಂದು ಸಿಎನ್‌ಎನ್ ವರದಿಸಿದೆ.
ಸ್ಥಳೀಯ ಬುಧವಾರ ರಾತ್ರಿ ಹಾಗೂ ಭಾರತೀಯ ಕಾಲಮಾನ ಗುರುವಾರ ಮುಂಜಾವ ಅಪರಿಚಿತ ವ್ಯಕ್ತಿಗಳು ಬೌಲಿಂಗ್ ಅಲ್ಲೆ ಎಂಬ ರೆಸ್ಟೋರೆಂಟ್ ಮೇಲೆ ಈ ದಾಳಿ ಮಾಡಿ ಅನಾಹುತ ಎಸಗಿ ದೋಚಿ ಪರಾರಿಯಾಗಿದ್ದಾರೆ. ಪೋಲೀಸರು ಇಲ್ಲಿಂದ 36 ಕಿಲೋಮೀಟರ್ ದೂರದಲ್ಲಿ ಶಂಕಿತರಿಗಾಗಿ ಹುಡುಕಾಟ ನಡೆಸಿದ್ದಾರೆ.