ಭಾರತದಲ್ಲಿ 2016- 20ರ ನಡುವೆ 3,999 ಕೋಮು ಇಲ್ಲವೆ ಧಾರ್ಮಿಕ ಗಲಭೆಗಳು ನಡೆದಿವೆ ಎಂದು ಗೃಹ ವ್ಯವಹಾರಗಳ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ಸಂಸದರಾದ ಶಶಿ ತರೂರ್ ಮತ್ತು ಪ್ರಕಾಶ್ ಜೋಶಿಯವರ ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.
ಎನ್ಸಿಆರ್ಬಿ- ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಮಾಹಿತಿಯಂತೆ 2016ರಲ್ಲಿ 869, 2017ರಲ್ಲಿ 723, 2018ರಲ್ಲಿ 512, 2019ರಲ್ಲಿ 438, 2020ರಲ್ಲಿ 887 ಧಾರ್ಮಿಕ ಇಲ್ಲವೇ ಕೋಮು ಗಲಭೆಗಳು ನಡೆದಿವೆ. ಬಿಜೆಪಿ ಕೋಮು ಗಲಭೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರತಿ ಪಕ್ಷಗಳವರು ಲೋಕ ಸಭೆಯಲ್ಲಿ ಆರೋಪ ಮಾಡಿದರು.