ಭಾರತದಲ್ಲಿ ಕನಿಷ್ಟ 21 ನಕಲಿ ವಿಶ್ವವಿದ್ಯಾನಿಲಯಗಳು ಬೆಳಕಿಗೆ ಬಂದಿದ್ದು, ಅವು ಯಾವುದೇ ಪದವಿ ನೀಡುವ ಮಾನ್ಯತೆ ಪಡೆದಿಲ್ಲ ಎಂದು ಯುಜಿಸಿ- ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗದ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ. ಬಡಾಗಾನಿ ಸರ್ದಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ ಎನ್ನುವುದು ಕರ್ನಾಟಕದ ನಕಲಿ ವಿಶ್ವವಿದ್ಯಾನಿಲಯವಾಗಿದೆ.

 ದಿಲ್ಲಿಯಲ್ಲಿ ಆಧ್ಯಾತ್ಮಿಕ ವಿಶ್ವವಿದ್ಯಾನಿಲಯ, ವಿಶ್ವಕರ್ಮ ಓಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್ ಎಂದು ಅತಿ ಹೆಚ್ಚು 8 ನಕಲಿ ವಿಶ್ವವಿದ್ಯಾನಿಲಯಗಳು ಇವೆ. ಎರಡನೆಯ ಸ್ಥಾನದ ಉತ್ತರ ಪ್ರದೇಶದಲ್ಲಿ 4 ನಕಲಿ ವಿಶ್ವವಿದ್ಯಾನಿಲಯಗಳು ಇದ್ದು ಅವುಗಳಲ್ಲಿ ಸುಭಾಷ್ ಚಂದ್ರ ಬೋಸ್ ವಿಶ್ವವಿದ್ಯಾನಿಲಯ, ಗಾಂಧಿ ಹಿಂದಿ ವಿಶ್ವವಿದ್ಯಾನಿಲಯಗಳೂ ಸೇರಿವೆ.ಇವಲ್ಲದೆ ಮಹಾರಾಷ್ಟ್ರ, ಕೇರಳ, ಪಶ್ಚಿಮ  ಬಂಗಾಳ, ಪಾಂಡಿಚೇರಿ, ಆಂಧ್ರ ಪ್ರದೇಶ, ಒಡಿಶಾಗಳಲ್ಲೂ ನಕಲಿ ವಿಶ್ವವಿದ್ಯಾನಿಲಯಗಳು ಪತ್ತೆಯಾಗಿವೆ. ಪತ್ತೆಯಾಗದವುಗಳೂ ಹಲವು ಎಂದು ಹೇಳಲಾಗುತ್ತಿದೆ.