ಪುತ್ತೂರು, ಮೇ 01: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಆಯೋಜಿಸಿದ ವಿವಿ ಮಟ್ಟದ ಭೌತಶಾಸ್ತ್ರ ಸ್ಪರ್ಧೋತ್ಸವ ‘ಫಿಸಿಕಾ 2025’ ರಲ್ಲಿ ಭಾಗವಹಿಸಿದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಇದರ ಬಿಎಸ್ಸಿ ವಿದ್ಯಾರ್ಥಿಗಳು, ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ರಸಪ್ರಶ್ನೆ, ಉಪನ್ಯಾಸ, ಚಿತ್ರಕಲೆ, ವಿಜ್ಞಾನ ಪ್ರಯೋಗ, ನಿಧಿಯ ಶೋಧ, ವಿಡಿಯೋ ದಾಖಲೀಕರಣ ಮುಂತಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ ಆಂಟೋನಿ ಪ್ರಕಾಶ್ ಮೊಂತೆರೋ ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ ಚಂದ್ರಶೇಖರ ಕೆ ಹಾಗೂ ಸಹಾಯಕ ಪ್ರಾಧ್ಯಾಪಕಿಯಾದ ಪೂಜಾಶ್ರೀ ವಿ ರೈ ಮಾರ್ಗದರ್ಶನವನ್ನು ನೀಡಿದ್ದರು.