ಬಿಲ್ಕಿಸ್ ಬಾನೊ ಅತ್ಯಾಚಾರ ಮತ್ತು ಆಕೆಯ ಕುಟುಂಬದವರ ಕೊಲೆಗೆ ಶಿಕ್ಷಿತರಾಗಿದ್ದು, ಗುಜರಾತ್ ಬಿಜೆಪಿ ಸರಕಾರದ ದಯದಿಂದ ಬಿಡುಗಡೆ ಹೊಂದಿದ್ದ 11 ಮಂದಿ ಶಿಕ್ಷೆ ಹೊಂದಿದವರು ಪಂಚಮಹಲ್ ಜಿಲ್ಲೆಯ ಗೋದ್ರಾ ಜೈಲಿಗೆ ಅಧಿಕಾರಿಗಳ ಎದುರು ಶರಣಾದರು ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಎನ್. ಎಲ್. ದೇಸಾಯಿ ತಿಳಿಸಿದ್ದಾರೆ.

ಬಿಕಾಭಾಯಿ ವೊಹಾನಿಯಾ, ಬಿಪಿನಚಂದ್ರ ಜೋಶಿ, ಕೇಸರಭಾಯಿ ವೊಹಾನಿಯಾ, ಗೋವಿಂದ ನಯ್, ಜಸ್ವಂತ್ ನಯ್, ಮಿತೇಶ್ ಭಟ್, ಪ್ರದೀಪ್ ಮೋರ್ದಿಯಾ, ರಾಧೇಶಾಂ ಶಾ, ರಾಜುಭಾಯಿ ಸೋನಿ, ರಮೇಶ್ ಚಂದನ, ಶೈಲೇಶ್ ಭಟ್ ಶರಣಾದವರು.
2002ರ ಗುಜರಾತ್ ಗಲಭೆಯ ಅಪರಾಧಿಗಳು ಇವರು. ಗುಜರಾತ್ ಸರಕಾರವು 2022ರ ಆಗಸ್ಟ್ 15ರಂದು ಇವರನ್ನು ಬಿಡುಗಡೆ ಮಾಡಿಕೊಂಡಿತ್ತು. ಗುಜರಾತ್ ಸರಕಾರ ವಿವೇಚನಾ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಜನವರಿ 8ರಂದು ಖಂಡಿಸಿದ ಸುಪ್ರೀಂ ಕೋರ್ಟ್ ಜೈಲಿಗೆ ಶರಣಾಗುವಂತೆ ತಿಳಿಸಿತ್ತು. ಕಾಲಾವಕಾಶ ಕೇಳಿದ್ದನ್ನು ಜನವರಿ 19ರಂದು ನಿರಾಕರಿಸಿತ್ತು. ಹಾಗಾಗಿ ಅಪರಾಧಿಗಳಿಗೆ ಜೈಲಿಗೆ ಶರಣಾಗದೆ ಬೇರೆ ದಾರಿ ಇರಲಿಲ್ಲ.